ಕ್ಯಾಲನೂರು: ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ಮದ್ದೇರಿ ಗ್ರಾಮ ಪಂಚಾಯಿತಿಯ ಕದರೀಪುರ ಸಣ್ಣ ಹಳ್ಳಿಯಾಗಿದ್ದರೂ ಇಲ್ಲಿನ ಪುರಾತನ ಯೋಗನರಸಿಂಹ ದೇವಾಲಯ ತನ್ನದೇ ಇತಿಹಾಸ ಹೊಂದಿರುವುದರಿಂದ ಪ್ರಸಿದ್ಧಿ ಪಡೆದಿದೆ. ಈ ದೇವಾಲಯದಲ್ಲಿ ಅತ್ಯಂತ ಶಕ್ತಿಶಾಲಿ ಯೋಗ ನರಸಿಂಹಸ್ವಾಮಿಯನ್ನು ಮಹಾಭಾರತ ಕಾಲದಲ್ಲಿ ಶ್ರೀ ಕೃಷ್ಣನ ಬಾಲ್ಯ ಗುರುಗಳಾದ ಶ್ರೀ ಸಾಂದೀಪನಿ ಋಷಿಗಳು ಸ್ಥಾಪಿಸಿದರೆಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ದ್ವಾಪರ ಯುಗದ ದೇವಾಲಯ: ಕುರುೇತ್ರ ನಡೆದಾಗ ಪಾಂಡವರು ವನವಾಸಕ್ಕಾಗಿ ಚಿಂತಾಮಣಿ ತಾಲೂಕಿನ ಕೈವಾರ, ಕೋಲಾರ ವ್ಯಾಪ್ತಿಯ ಶತಶೃಂಗ ಪರ್ವತದಲ್ಲಿ ತಂಗಿದ್ದರಂತೆ. ಈ ಸಂದರ್ಭದಲ್ಲಿ ಶ್ರೀ ಕೃಷ್ಣ, ಪಾಂಡವರ ಯೋಗ ೇಮ ವಿಚಾರಿಸಲು ಕೈವಾರ ಮಾರ್ಗವಾಗಿ ಗುಡ್ಡಾಕೇಶ ತೀರ್ಥ ಊರೆಂದು ಕರೆಯುತ್ತಿದ್ದ ಈಗಿನ ಕದರೀಪುರಕ್ಕೆ ಬಂದಾಗ ಸಂಧ್ಯಾವಂದನೆ ಮಾಡಲು ನೀರು ಸಿಗದಿದ್ದಾಗ ಅರ್ಜುನನಿಗೆ ನೀರಿನ ವ್ಯವಸ್ಥೆ ಮಾಡಲು ಆಜ್ಞಾಪಿಸಿದನಂತೆ. ಅರ್ಜುನ ಶ್ರೀಕೃಷ್ಣನ ಬಾಲ್ಯ ಗುರುಗಳಾದ ಶ್ರೀ ಸಾಂದೀಪನಿ ಋಷಿಗಳು ಸ್ಥಾಪಿಸಿದ್ದ ಯೋಗ ನರಸಿಂಹಸ್ವಾಮಿ ಪಾದದ ಕೆಳಗೆ ಕಾಣಿಸಿದ ಕಲ್ಲಿನ ತೊರೆಗೆ ಬಾಣ ಪ್ರಯೋಗ ಮಾಡಿದಾಗ ಗಂಗೆ ಚಿಮ್ಮಿದ್ದನ್ನು ಕಂಡು ಅಚ್ಚರಿಗೊಂಡು ನೀರು ಹರಿದು ಸೇರಿದ ೂರ ಅರಣ್ಯ ಪ್ರದೇಶಕ್ಕೆ ಹೋಗಿ ನೋಡಿದಾಗ ಅಲ್ಲಿ ಗಂಗೆ ಅವರಿಸಿತಂತೆ. ಇಲ್ಲಿಯೇ ಸ್ನಾನ, ಸಂಧ್ಯಾವಂದನೆ ಮಾಡಿ ಪ್ರಮಾಣ ಮುಂದುವರಿಸಿದ್ದರಿಂದ ಈ ೇತ್ರಕ್ಕೆ ಮಹತ್ವ ಹೆಚ್ಚಾಗಿದೆ ಎಂಬುದು ದೇವಾಲಯದ ಬಗ್ಗೆ ಅರ್ಚಕರು ಸಂಗ್ರಹಿಸಿಟ್ಟಿರುವ ೇತ್ರ ಮಹಿಮೆಗೆ ಸಂಬಂಧಿಸಿದ ಕರಪತ್ರದಲ್ಲಿ ತಿಳಿಯಬಹುದಾಗಿದೆ.
ಬತ್ತದ ಪುಷ್ಕರಣಿ: ಕೃಷ್ಣನ ಆದೇಶದಿಂದ ಯೋಗ ನರಸಿಂಹಸ್ವಾಮಿ ದೇವರ ಪಾದದ ಕೆಳಗೆ ಝರಿ ಕೊರೆದು ಗಂಗೆ ಎಲ್ಲರಿಗೂ, ಎಲ್ಲ ಕಾಲಕ್ಕೂ ಸಿಗುವಂತೆ ಮಾಡಿರುವುದಕ್ಕಾಗಿ ಪುಷ್ಕರಣಿ ನಿರ್ಮಿಸಲಾಗಿದೆ. ಎಂತಹದ್ದೇ ಬರಗಾಲ ಇದ್ದರೂ ಕಲ್ಯಾಣಿಯಲ್ಲಿ ಮಾತ್ರ ನೀರು ಇರುತ್ತದೆ.
ಕಷ್ಟಗಳ ನಿವಾರಕ: ಯೋಗ ನರಸಿಂಹ ದೇವಾಲಯದ ಸುತ್ತ ದಟ್ಟವಾದ ಗಿಡ&ಮರಗಳು ಬೆಳೆದಿವೆ. ಬೆಟ್ಟ ಗುಡ್ಡಗಳಿಂದ ಆಕರ್ಷಿತವಾಗಿದೆ. ಈ ದೇವರಿಗೆ ಹರಕೆ ಹೊತ್ತುಕೊಂಡರೆ ಕಷ್ಟ&ನಷ್ಟಗಳಿಂದ ಪಾರಾಗಬಹುದು, ಪ್ರೇತ&ಪಿಶಾಚಿ ಕಾಟದಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇರುವುದರಿಂದ ಕೋಲಾರ, ಚಿಕ್ಕಬಳ್ಳಾಪುರ ಮಾತ್ರವಲ್ಲದೆ ಅನೇಕ ಕಡೆಗಳಿಂದ ಭಕ್ತರು ಬಂದು ಪೂಜೆ ಸಲ್ಲಿಸಿ ಹರಕೆ ತೀರಿಸುವುದು ವಿಶೇಷ.
ಭಕ್ತರಿಗೆ ಬೇಕು ಸೌಕರ್ಯ: ಯೋಗ ನರಸಿಂಹ ಸ್ವಾಮಿಯನ್ನು ಕರಿ ಕಲ್ಲಿನಿಂದ ಕೆತ್ತಲಾಗಿದೆ. ಪ್ರತಿ ಮಂಗಳವಾರ ದೇವರಿಗೆ ವಿಶೇಷ ಪೂಜೆ ನಡೆಯುತ್ತದೆ. ಮಂಗಳವಾಗ ದೇವರಿಗೆ ವಿಶೇಷ ಎಂಬ ಕಾರಣಕ್ಕೆ ನೂರಾರು ಭಕ್ತರು ಬರುತ್ತಾರೆ, ಮುಜರಾಯಿ ಇಲಾಖೆಯಿಂದ ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ, ತಂಗುದಾಣ, ಪ್ರಸಾದ ವ್ಯವಸ್ಥೆ, ಶೌಚಗೃಹ ಇನ್ನಿತರ ಅಗತ್ಯ ಸೌಕರ್ಯ ಇಲ್ಲದಿರುವುದರಿಂದ ಅರ್ಚಕರು ದೂರದಿಂದ ಬರುವ ಭಕ್ತರಿಗೆ ಮನೆಯಲ್ಲೇ ಕೊಠಡಿ, ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.
ಚಲುವರಾಯಸ್ವಾಮಿಗೂ ಮುಕ್ತಿ: ದಣಾದ್ರಿ ಎಂದೂ ಪ್ರಸಿದ್ಧಿ ಪಡೆದಿದೆ, ಸುಮಾರು 850 ವರ್ಷಗಳ ಹಿಂದೆ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಆಗಿನ ದೊರೆ ದೆಹಲಿಯ ಮುಸಲ್ಮಾನರು ಯೋಗ ಚಲುವರಾಯಸ್ವಾಮಿಯ ವಿಗ್ರಹವನ್ನು ತೆಗೆದುಕೊಂಡು ಹೋಗಿದ್ದರಿಂದ ಭಗವಾನ್ ರಾಮಾನುಜಾಚಾರ್ಯರು ಶಿಷ್ಯರೊಂದಿಗೆ ಕದರೀಪುರಕ್ಕೆ ಪಾದಯಾತ್ರೆ ಬಂದು ಯೋಗ ನರಸಿಂಹಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ವಿಗ್ರಹ ತೆಗೆದುಕೊಂಡು ಹೋಗಿದ್ದ ವ್ಯಕ್ತಿಗಳು ಚಲುವರಾಯಸ್ವಾಮಿ ವಿಗ್ರಹಗಳನ್ನು ದೇವಾಲಯಕ್ಕೆ ವಾಪಸ್ ಮಾಡಿದ್ದರು ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ನಡೆಯುವ ಕಾರ್ಯಕ್ರಮಗಳು: ಪ್ರತಿ ವರ್ಷ ಶ್ರೀಕೃಷ್ಣ ಜಯಂತಿ, ರಾಮಾನುಜ ಜಯಂತಿ, ಶ್ರೀ ರಾಮಾನುಜರ ತಿರುನಕ್ಷತ್ರ, ಕಾರ್ತಿಕ ಮಾಸದಲ್ಲಿ ದೀಪೋತ್ಸವ, ತಿರುಮಲ ತಿರುಪತಿ ದೇವಾಲಯದಿಂದ ತಿರುಪಾವೈ ಉಪನ್ಯಾಸ, ಆಂಡಾಳ್ ಜಯಂತಿ, ಬ್ರಹ್ಮರಥೋತ್ಸವ ಜರುಗುತ್ತದೆ.
ದೇವಾಲಯಕ್ಕೆ ದಾರಿ: ಕೋಲಾರದಿಂದ ಕದರೀಪುರ 22 ಕಿಮೀ, ಬೆಂಗಳೂರಿನಿಂದ 72, ಚಿಕ್ಕಬಳ್ಳಾಪುರದಿಂದ 55 ಕಿಮೀ ದೂರದಲ್ಲಿದೆ. ಸದ್ಯಕ್ಕೆ ಕೆಎಸ್ಆರ್ಟಿಸಿಯಿಂದ 2 ಬಸ್ ಸಂಚರಿಸುತ್ತಿದ್ದು ಹೆಚ್ಚಿನ ಬಸ್ಗಳ ವ್ಯವಸ್ಥೆ ಆಗಬೇಕಿದೆ.
ಮಾಹಿತಿಗೆ: ದೇವಾಲಯದಲ್ಲಿ ಸಿಗುವ ಸೇವೆ, ಮಾಹಿತಿಗಾಗಿ ಆರ್ಚಕರಾದ ಶ್ರೀ ರಂಗಚಾರ್, ಕೆ.ಎಲ್.ವೇಣುಗೋಪಾಲಾಚಾರ್, 9448806305, 7975584600 ಸಂಪರ್ಕಿಸಬಹುದು.
ದೈವಶಕ್ತಿ ಇರುವ ದೇವಾಲಯ ಇದಾಗಿದೆ. ಭೂತ ಪ್ರೇತ ಪಿಶಾಚಾದಿ ದುಷ್ಟಗ್ರಹ ನಿವಾರಣೆಯ ಕೇಂದ್ರವಾಗಿದೆ. ಸರ್ವದೋಷ ಪರಿಹರಿಸುವ ಅಭಯದಾಯಕ ಯೋಗನರಸಿಂಹ ಭಕ್ತರ ಅಭೀಷ್ಟಗಳನ್ನು ಈಡೇರಿಸುವ ನರಸಿಂಹ ಎಂದು ಖ್ಯಾತಿಪಡೆದಿದೆ. ಕೆ.ಎಲ್.ವೇಣುಗೋಪಾಲಾಚಾರ್, ಅರ್ಚಕ