ಬಾಗಲಕೋಟೆ ಕಿಲ್ಲಾ ಓಣಿಯ ಸುಧಾಬಾಯಿ ಕಾವೇರಿ ಅವರ ಕುಟುಂಬಕ್ಕೆ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಸಾಂತ್ವನ ಹೇಳಿದರು. ನಗರಸಭೆ ಸದಸ್ಯರಾದ ಶ್ರೀನಿವಾಸ ಸಜ್ಜನ, ಪ್ರದೀಪ ರಾಯ್ಕರ, ಮುಖಂಡರಾದ ಉಮೇಶ ಪಡಸಲಗಿ, ವಿನಾಯಕ ತಾಳಿಕೋಟಿ ಉಪಸ್ಥಿತರಿದ್ದರು. 
ಜಿಲ್ಲೆ

ಸಾಂತ್ವಾನ ಹೇಳಿದ ಶಾಸಕ ಚರಂತಿಮಠ

ಬಾಗಲಕೋಟೆ: ಮಳೆಯಿಂದ ಮನೆ ಕುಸಿತವಾಗಿ ಮೃತಪಟ್ಟ ಕಿಲ್ಲಾ ಓಣಿಯ ಸುಧಾಬಾಯಿ ಕಾವೇರಿ ಅವರ ಕುಟುಂಬಕ್ಕೆ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಸಾಂತ್ವನ ಹೇಳಿದರು.
ಬೆಂಗಳೂರಿನಿಂದ ಬಾಗಲಕೋಟೆಗೆ ಆಗಮಿಸಿದ ಅವರು ನೇರವಾಗಿ ಸುಧಾಬಾಯಿ ಅವರ ಮನೆಗೆ ತೆರಳಿ ಕುಟುಂಬಸ್ಥರನ್ನು ಭೇಟಿ ಮಾಡಿ ಮಕ್ಕಳಾದ ಆಶಾ, ಛಾಯಾ, ಅಪ್ಪಣ್ಣ ಅವರೊಂದಿಗೆ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ತಕ್ಷಣದಲ್ಲಿ ಪರಿಹಾರ ಒದಗಿಸಲು ಸೂಚಿಸಿದ್ದೆ, ಪರಿಹಾರ ತಲುಪಿದೆ. ಘಟನೆ ನಡೆದಿರುವುದು ದುರದೃಷ್ಟಕರ. ಮೇಲ್ಛಾಣಿಗೆ ತಗಡಿನ ವ್ಯವಸ್ಥೆ ಕಲ್ಪಿಸುವಂತೆ ಶಾಸಕರು ಸೂಚಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಶ್ರೀನಿವಾಸ ಸಜ್ಜನ, ಪ್ರದೀಪ ರಾಯ್ಕರ, ಮುಖಂಡರಾದ ಉಮೇಶ ಪಡಸಲಗಿ, ವಿನಾಯಕ ತಾಳಿಕೋಟಿ ಉಪಸ್ಥಿತರಿದ್ದರು.