ಸಾಂಗ್ಲಿಯಲ್ಲಿ ಬೆಳಗಾವಿ ಮೂಲದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!
ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ
ಚಿಕ್ಕೋಡಿ: ಎಂಬಿಬಿಎಸ್ ಓದುತಿದ್ದ ಬೆಳಗಾವಿ ಮೂಲದ ವಿದ್ಯಾರ್ಥಿನಿಯ ಮೇಲೆ ಆಕೆಯ ಇಬ್ಬರು ಸಹಪಾಠಿಗಳು ಮತ್ತು ಅವರ ಸ್ನೇಹಿತರೊಬ್ಬರು ಸೇರಿ ಮದ್ಯದ ಅಮಲಿನಲ್ಲಿ ಅತ್ಯಾಚಾರ ಎಸಗಿರುವ ಘಟನೆ
ಸಂತ್ರಸ್ತ ವಿದ್ಯಾರ್ಥಿನಿ ಬೆಳಗಾವಿ ಮೂಲದ ನಿವಾಸಿಯಾಗಿದ್ದು, ಪುಣೆ, ಸೋಲಾಪುರ ಮತ್ತು ಸಾಂಗ್ಲಿಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು,ನ್ಯಾಯಾಲಯವು ಮೇ 27 ರವರೆಗೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ತಿಳಿದಿ ಬಂದಿದೆ.
22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಮೇ 18 ರಂದು ರಾತ್ರಿ 10 ಗಂಟೆ ಸುಮಾರಿಗೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ತೆರಳಿದ್ದ ವೇಳೆ ಆಕೆಯನ್ನು ಖಾಸಗಿ ಅಪಾರ್ಟ್ಮೆಂಟ್ ಕರೆದೊಯ್ದು ,ಆಕೆಯ ಮೇಲೆ ದಾಳಿ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮದ್ಯದ ಅಮಲಿನಲ್ಲಿದ್ದ ಆರೋಪಿಗಳು ಆಕೆಗು ಮದ್ಯ ಕುಡಿಸಿದ ನಂತರ ತಲೆತಿರುಗುವಿಕೆ ಅನುಭವಿಸಿದ್ದಾಳೆ ಎಂದು ಬದುಕುಳಿದ ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ. 20 ರಿಂದ 22 ವರ್ಷ ವಯಸ್ಸಿನ ಮೂವರು ಆರೋಪಿಗಳು ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಘಟನೆ ಬಗ್ಗೆ ಯಾರಿಗಾದರೂ ತಿಳಿಸದಂತೆ ಬೆದರಿಕೆ ಹಾಕಿದ್ದಾರೆ.
ನಂತರ ಸಂತ್ರಸ್ತೆ ಧೈರ್ಯ ಮಾಡಿ ತನ್ನ ಪೋಷಕರಿಗೆ ಘಟನೆಯನ್ನು ವಿವರಿಸಿದ್ದಾಳೆ. ನಂತರ ಕುಟುಂಬಸ್ಥರು ವಿಶ್ರಂಬಾಗ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಆರೋಪಿಗಳ ವಿರುದ್ಧ ವಿಶ್ರಂಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.