ಹುಣಸಗಿ (ಗ್ರಾಮೀಣ): ಶುದ್ಧ ಕುಡಿಯುವ ನೀರಿಲ್ಲ. ಚರಂಡಿ, ಸಿಸಿ ರಸ್ತೆ, ಸಮರ್ಪಕ ವಿದ್ಯುತ್ ಸೇರಿ ಹತ್ತು ಹಲವು ಸಮಸ್ಯೆಗಳಿಂದ ಪಟ್ಟಣದ ವಾರ್ಡ್ ನಂ.13ರ ನಿವಾಸಿಗಳು ನಿತ್ಯ ನರಕಯಾತೆನೆ ಅನುಭವಿಸುವಂತಾಗಿದ್ದು, ಇದು ಕೇವಲ ಒಂದು ದಿನದ ಗೋಳಲ್ಲ. ಪ್ರತಿನಿತ್ಯವೂ ಇದೇ ಪರಿಸ್ಥಿತಿ ಅನುಭವಿವಂತಾಗಿದೆ.
ಇದ್ದ ಚರಂಡಿ ಸ್ವಚ್ಛಗೊಳಿಸದ ಕಾರಣ ತ್ಯಾಜ್ಯ ತುಂಬಿಕೊAಡು ಗಬ್ಬು ನಾರುತ್ತಿದೆ. ಅಲ್ಲದೆ ಮಳೆ ನೀರು ಅಲ್ಲಲ್ಲಿ ಶೇಖರಣೆಗೊಂಡು ಸೊಳ್ಳೆಗಳ ಉತ್ಪತ್ತಿಯ ತಾಣವಾಗಿ ಮಾರ್ಪಟ್ಟಿದೆ. ಇದರಿಂದ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಕಾಲ ಕಳೆಯಬೇಕಾಗಿದೆ.
ಚರಂಡಿ ಪಕ್ಕದ ರಸ್ತೆಯಲ್ಲಿ ಹಾವು, ಚೇಳು ಮತ್ತು ಏಡಿಗಳು ಸರಾಗವಾಗಿ ರಸ್ತೆಯಲ್ಲಿಯೇ ರಾಜಾರೋಶವಾಗಿ ಸಂಚರಿಸುತ್ತವೆ. ಮಕ್ಕಳು ವೃದ್ಧರು ಮತ್ತು ಮಹಿಳೆಯರು ಈ ರಸ್ತೆಯಲ್ಲಿ ಓಡಾಡಬೇಕಾದರೆ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸಿಸಿ ರಸ್ತೆ ನಿರ್ಮಾಣ ಮಾಡದ ಕಾರಣ ಸತತ ಮಳೆಯಿಂದ ನೀರು ಸಂಗ್ರಗೊAಡಿದೆ. ಇದರಿಂದ ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ. ಕೊಚ್ಚೆಯಿಂದ ಕೂಡಿದ ಈ ದುರ್ಗಮ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸಾಕಷ್ಟು ಬಾರಿ ಬಿದ್ಧ ಘಟನೆ ಕೂಡ ನಡೆದಿವೆ. ಹೀಗಾಗಿ ಸಂಬAಧಿಸಿದ ಅಧಿಕಾರಿಗಳು ಬೇಗ ವಾರ್ಡ್ಗೆ ಭೇಟಿ ನೀಡಿ, ಸಮಸ್ಯೆಗೆ ಸ್ಪಂದಿಸಬೇಕು ಎಂದು ವಾರ್ಡ್ ನಿವಾಸಿಗಳ ಒತ್ತಾಯಿಸಿದ್ದಾರೆ.
ಮಳೆ ನೆಪಮಾಡಿಕೊಂಡು ಜೆಸ್ಕಾಂನವರು ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಹಾಗೊಂದು ವೇಳೆ ಪೂರೈಕೆ ಮಾಡಿದರೆ ಓಲ್ಟೆಟ್ ಇರುವುದಿಲ್ಲ. ಇದನ್ನು ಪ್ರಶ್ನಿಸಿದ ಮಳೆ ಬಂದಿದೆ ಹೀಗಾಗಿ ಓಲ್ಟೆಜ್ ಇಲ್ಲ ಎಂಬ ಸಬೂಬು ನೀಡುತ್ತಾರೆ ಅದಕ್ಕಾಗಿ ಕೂಡಲೇ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಗ್ರಾಮ ಪಂಚಾಯಿತಿಯಿAದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ನಾಲ್ಕು ವರ್ಷ ಕಳೆಯುತ್ತಾ ಬಂದರೂ ಸಮರ್ಪಕ ಅಭಿವೃದ್ಧಿ ಕಾಣದಿರುವುದು ನಿವಾಸಿಗಳಿಗೆ ಜನಪ್ರತಿನಿಧಿಗಳ ವಿರುದ್ಧ ಬೇಸರ ವ್ಯಕ್ತಪವಾಗಿದೆ. ಹೀಗಾಗಿ ಕೂಡಲೇ ಸಂಬAಧಿಸಿದ ಅಧಿಕಾರಿಗಳು ಚರಂಡಿ, ಸಿಸಿ ರಸ್ತೆ ಮತ್ತು ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.