ಸೊರಬ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಆರೋಗ್ಯ ಜಾಗೃತಿ ಸಭೆಯಲ್ಲಿ ಟಿಎಚ್‌ಒ ಡಾ. ನೂತನ ನಾಯಕ್ ಮಾತನಾಡಿದರು. ಮಂಜುಳಾ ಹೆಗಡಾಳ್, ಕೆ.ಜಿ.ಕುಮಾರ್ ಇತರರಿದ್ದರು. 
ಜಿಲ್ಲೆ

ಸಾಂಕ್ರಾಮಿಕ ರೋಗಗಳ ಹರಡದಂತೆ ಜಾಗ್ರತೆ ವಹಿಸಿ

ಸೊರಬ: ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ವಚ್ಛತೆ ಕುರಿತು ಅಭಿವೃದ್ಧಿ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಿ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮವಹಿಸಬೇಕು ಎಂದು ತಹಸೀಲ್ದಾರ್ ಮಂಜುಳಾ ಹೆಗಡಾಳ್ ತಿಳಿಸಿದರು. ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸೋಮವಾರ ಕರೊನಾ, ಕೆಎ್ಡಿ, ಡೆಂೆ ಮತ್ತಿತರ ಕಾಯಿಲೆಗಳು ಹರಡದಂತೆ ಕ್ರಮವಹಿಸಲು ತಾಲೂಕು ಆರೋಗ್ಯ ಇಲಾಖೆಯಿಂದ ಪಿಡಿಒಗಳು ಹಾಗೂ ವಿವಿಧ ಅಧಿಕಾರಿಗಳಿಗೆ ಏರ್ಪಡಿಸಲಾದ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಪ್ರತಿ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಬಹಳ ಮುಖ್ಯ. ಗ್ರಾಮಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಜತೆ ಭೇಟಿ ನೀಡಬೇಕು. ಗ್ರಾಮದ ಜನರ ಆರೋಗ್ಯ ಕುರಿತು ವರದಿ ಪಡೆದುಕೊಳ್ಳಬೇಕು. ಸರ್ಕಾರದ ನಿಯಮಗಳು ಹಾಗೂ ಆರೋಗ್ಯ ಇಲಾಖೆಯ ಸಲಹೆ ಸೂಚನೆಗಳನ್ನು ಕಾಲಕಾಲಕ್ಕೆ ಪಾಲಿಸುವಂತೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು. ತಾಲೂಕು ಆರೋಗ್ಯಾಧಿಕಾರಿ ನೂತನ ನಾಯಕ್ ಮಾತನಾಡಿ, ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಜನರಲ್ಲಿ ಡೆಂೆ, ಕರೊನಾ ಮತ್ತು ಕೆಎ್ಡಿ ಬಗ್ಗೆ ಅರಿವು ಮೂಡಿಸಲು ಪಿಡಿಒಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಸಹಾಯಕ ಕೃಷಿ ನಿರ್ದೇಶಕ ಕೆ.ಜಿ.ಕುಮಾರ್, ತಾಪಂ ಸಹಾಯ ಅಭಿವೃದ್ಧಿ ಅಧಿಕಾರಿ ಶ್ರೀರಾಮ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ, ಹಿರಿಯ ಆರೋಗ್ಯ ನಿರೀಕ್ಷಕ ಯಶವಂತ್, ಪುರಸಭೆ ಆರೋಗ್ಯ ನೀರೀಕ್ಷಕ ರವಿಕುಮಾರ್, ಆನವಟ್ಟಿ ಪಪಂ ಆರೋಗ್ಯ ನಿರೀಕ್ಷಕ ಪ್ರಭು, ಪಿಡಿಒಗಳಾದ ಕೆ.ಆರ್.ಸಂದೀಪ್, ರಿಯಾಜ್ ಅಹ್ಮದ್, ಮಲ್ಲಮ್ಮ, ಚಿದಾನಂದ, ನಾಗೇಂದ್ರಪ್ಪ, ಜಗದೀಶ್ ಇತರರಿದ್ದರು.

ತಾಲೂಕಿನ ವ್ಯಾಪ್ತಿಯಲ್ಲಿ ಈವರೆಗೆ ಡೆಂೆ, ಕೆಎ್ಡಿ ಮತ್ತು ಕರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಜನಸಂದಣಿ ಇರುವ ಸ್ಥಳದಲ್ಲಿ ಮಾಸ್ಕ್ ಧರಿಸುವುದು ಒಳ್ಳೆಯದು. ಶಾಲಾ ಮಕ್ಕಳು, ಶಿಕ್ಷಕರು ಶೀತ, ಜ್ವರ, ಕೆಮ್ಮು ಕಂಡುಬಂದರೆ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾದ ನಂತರ ಶಾಲೆಗೆ ತೆರಳುವಂತೆ ಸರ್ಕಾರ ಮಾರ್ಗಸೂಚಿ ನೀಡಿದೆ. ಹಾವು, ಯಾವುದೇ ಕಾಡು ಪ್ರಾಣಿಗಳು ಕಚ್ಚಿದರೆ ನಿರ್ಲಕ್ಷೃ ತೋರದೆ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು. ನೂತನ ನಾಯಕ್ ತಾಲೂಕು ಆರೋಗ್ಯಾಧಿಕಾರಿ