ಕೊಕಟನೂರದ ಜನತಾ ಪ್ಲಾಟ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಚರಂಡಿಯಲ್ಲೇ ಕೊಳಚೆ ನೀರು ಸಂಗ್ರಹವಾಗಿರುವುದು. 
ಜಿಲ್ಲೆ

ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ

ಕೊಕಟನೂರ: ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ಗ್ರಾಮದ ಜನತಾ ಪ್ಲಾಟ್ ಹಾಗೂ ಎಸ್‌ಸಿ ಬಡಾವಣೆಯಲ್ಲಿ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿದ್ದು, ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ.

ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಈ ಬಡಾವಣೆಗಳಲ್ಲಿ ಸ್ವಚ್ಛತೆಯೇ ಮರೀಚಿಕೆಯಾಗಿದೆ. ನಿರ್ಮಾಣ ಹಂತದಲ್ಲಿರುವ ಚರಂಡಿ ಹಾಗೂ ತಗ್ಗು-ಗುಂಡಿಯಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತಿದೆ. ಹಂದಿಗಳ ಹಾವಳಿ, ಸೊಳ್ಳೆ ಕಾಟವೂ ಹೆಚ್ಚಿದೆ. ಈ ಬಗ್ಗೆ ಗ್ರಾಪಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ, ಸಮಸ್ಯೆಗೆ ಸ್ಪಂದನೆಯೇ ಸಿಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

ಕರೊನಾ ಸಂಕಷ್ಟ ಕಾಲದಲ್ಲಿ ಸ್ವಚ್ಛತೆಗೆ ಎಲ್ಲರೂ ಒತ್ತು ನೀಡಬೇಕಿದೆ. ಆದರೆ, ನಮ್ಮ ಬಡಾವಣೆಯಲ್ಲಿ ದುರ್ನಾತ ಹೆಚ್ಚಿದ್ದರೂ, ಗ್ರಾಪಂ ಅಧಿಕಾರಿಗಳು ನಮ್ಮ ಕಷ್ಟ ಕಣ್ಣೆತ್ತಿ ನೋಡುತ್ತಿಲ್ಲ. ಇಲ್ಲಿ ಸಾವು-ನೋವು ಸಂಭವಿಸಿದರೆ ಯಾರು ಹೊಣೆ?| ಮುಕುಂದ ಮಾದರ ಸ್ಥಳೀಯ ನಿವಾಸಿಕರೊನಾ ಹಿನ್ನೆಲೆಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ವಿಳಂಬವಾಗಿದೆ. ಶೀಘ್ರವೇ ಕಾಮಗಾರಿ ಮುಗಿಸಲಾಗುವುದು.| ಎಸ್.ಎಸ್.ತುಂಗಳ ಪಿಡಿಒ, ಕೊಕಟನೂರ

| ಮೋಹನ ಪಾಟಣಕರ ಕೊಕಟನೂರ