ಜಿಲ್ಲೆ

ಸಹೋದ್ಯೋಗಿಗಳ ನಡುವೆ ಇರಲಿ ಸೌಹಾರ್ದತೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ವೃತ್ತಿಯಲ್ಲಿ ಬದ್ಧತೆ ಹಾಗೂ ಸಹೋದ್ಯೋಗಿಗಳ ನಡುವೆ ಸೌಹಾರ್ದತೆ ಮುಖ್ಯ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.

ಡಯಟ್‌ನಲ್ಲಿ ಕಾರ್ಯನಿರ್ವಹಿಸಿ ವರ್ಗಾವಣೆಯಾದ ಉಪನ್ಯಾಸಕರು, ಸಿಬ್ಬಂದಿ ವರ್ಗದವರಿಗೆ ಶನಿವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಪ್ರತಿಯೊಬ್ಬರೂ ತಮ್ಮ ವೃತ್ತಿ ಪ್ರೀತಿಸಬೇಕು. ಶ್ರದ್ಧೆ, ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದರೆ ಸಮಾಜದಲ್ಲಿ ಗೌರವ ದೊರೆಯುತ್ತದೆ. ಸಹೋದ್ಯೋಗಿಗಳ ಜತೆ ಅನ್ಯೋನ್ಯತೆಯಿದ್ದಾಗ ವೃತ್ತಿ ಜೀವನದಲ್ಲಿ ಯಶಸ್ಸು ಲಭಿಸುತ್ತದೆ ಎಂದು ತಿಳಿಸಿದರು.

ಶೈಕ್ಷಣಿಕ ಚಟುವಟಿಕೆಗಳ ಯಶಸ್ಸಿಗೆ ಸಮಷ್ಠಿ, ಸಮನ್ವಯತೆ ಅಗತ್ಯ. ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರ ನಡುವೆ ಉತ್ತಮ ಬಾಂಧವ್ಯ ಇರಬೇಕು. ಇದರಿಂದ ಶೈಕ್ಷಣಿಕ ಚಟುವಟಿಕೆಗಳು ಯಶಸ್ವಿಯಾಗಲು ಸಾಧ್ಯ ಎಂದರು.

ವರ್ಗಾವಣೆಯಾದ ಕೆ.ಜಿ.ಪ್ರಶಾಂತ್, ಎನ್.ರಾಘವೇಂದ್ರ, ಕೆ.ಆರ್.ಲೋಕೇಶ್, ಆರ್.ಲಿಂಗರಾಜು, ಗೀತಾ, ಮಹೇಂದ್ರ, ನಿರ್ಮಲಾ, ಶಿವಕುಮಾರ್, ಅನಸೂಯಮ್ಮ ಅವರನ್ನು ಸನ್ಮಾನಿಸಲಾಯಿತು.

ಹಿರಿಯ ಉಪನ್ಯಾಸಕರಾದ ಎಸ್.ಸಿ.ಪ್ರಸಾದ್, ಎಸ್.ಜ್ಞಾನೇಶ್ವರ, ಎಚ್.ಗಿರಿಜಾ, ತಿಪ್ಪೇಸ್ವಾಮಿ, ಅರ್ಜುಮನ್ ಬಾನು, ಆರ್.ನಾಗರಾಜು, ಯು.ಸಿದ್ದೇಶಿ, ಎಸ್. ಬಸವರಾಜು, ವಿ.ಕನಕಮ್ಮ, ಬಿ.ಎಸ್.ನಿತ್ಯಾನಂದ, ಸಿ.ಎಸ್.ಲೀಲಾವತಿ, ಪದ್ಮಾ, ಶಿವಲೀಲಾ, ತಾಂತ್ರಿಕ ಸಹಾಯಕ ಅವಿನಾಶ್ ಇತರರಿದ್ದರು.

----