ಜಿಲ್ಲೆ

ಸಹೋದ್ಯೋಗಿ ಕೊಂದ ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ

ಚಿತ್ರದುರ್ಗ: ಭತ್ತ, ಮೆಕ್ಕೆಜೋಳ ಕಟಾವು ಯಂತ್ರದ ಬಾಡಿಗೆ ವಿಚಾರದಲ್ಲಿ ಸಹೋದ್ಯೋಗಿ ಚಾಲಕನೊಂದಿಗೆ ಜಗಳವಾಡಿ ಆತನನ್ನು ಹತ್ಯೆಗೈದಿದ್ದ ಅಪರಾಧಿಗೆ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.

ತಮಿಳುನಾಡು ತಿರುನಲ್‌ವೇಲಿ ಜಿಲ್ಲೆ ನಾಂಗನೇರಿ ತಾಲೂಕು ಮೇಲಮುನಂಜಿಪಟ್ಟಿ ಗ್ರಾಮದ ಆರ್ಮುಗಂ ನೈನರ್ ಶಿಕ್ಷೆಗೊಳಗಾದ ಅಪರಾಧಿ.

ಎಂ. ಚಂದ್ರನ್ ಎಂಬುವರಿಗೆ ಸೇರಿದ್ದ ಭತ್ತ, ಮೆಕ್ಕೆಜೋಳ ಕಟಾವು ಯಂತ್ರದ ಚಾಲಕರಾಗಿದ್ದ ಆರ್ಮುಗಂ ನೈನರ್, ಮಣಿಕಂಠನ್ ಹಾಗೂ ಮುರುಗನ್ ಎಂಬುವರು ಚಳ್ಳಕೆರೆ ತಾಲೂಕು ಚೌಳೂರು ಗೇಟ್ ಸಮೀಪದ ಖಾಸಗಿ ಶಾಲಾ ಕಟ್ಟಡದ ಕೊಠಡಿಯೊಂದರಲ್ಲಿ ವಾಸವಿದ್ದರು.

ಕಟಾವು ಯಂತ್ರದ ಬಾಡಿಗೆ ವಿಚಾರದಲ್ಲಿ ಆರ್ಮುಗಂ, ಮಣಿಕಂಠನ್‌ನೊಂದಿಗೆ ಜಗಳ ಮಾಡಿಕೊಂಡಿದ್ದು, 2023 ಡಿಸೆಂಬರ್ 20ರ ಂದು ರಾತ್ರಿ ಆರ್ಮುಗಂ ಕಬ್ಬಿಣದ ರಿಂಚ್‌ನಿಂದ ಮಣಿಕಂಠನ್‌ಗೆ ಹೊಡೆದು ಕೊಲೆ ಮಾಡಿ ಬೈಕ್‌ನಲ್ಲಿ ಪರಾರಿಯಾಗಿದ್ದ. ಪರ ಶುರಾಂಪುರ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣದ ತನಿಖೆ ನಡೆಸಿದ್ದ ಚಳ್ಳಕೆರೆ ಸಿಪಿಐ ಕೆ.ಸಮೀವುಲ್ಲಾ, ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಂಕರಪ್ಪ ನಿಂಬಣ್ಣ ಕಲ್ಕನಿ ಅವರು, ಅಪ ರಾಧಿ ಆರ್ಮುಗಂ ನೈನರ್‌ಗೆ, ಕಠಿಣ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ, ದಂಡ ಪಾವತಿಸಲು ವಿಫಲವಾದಲ್ಲಿ ಮತ್ತೆ ಒಂದು ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಪರ ಸರ್ಕಾರಿ ಅಭಿಯೋಜಕ ಎನ್.ಎಸ್. ಮಲ್ಲಯ್ಯ ವಾದಿಸಿದ್ದರು.

----