ಐನಾಪುರ: ಸೌಹಾರ್ದ ಸಂಸ್ಥೆಗಳಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ. ಬಡವರ, ಮಧ್ಯಮ ವರ್ಗದವರ, ರೈತರ ಅನುಕೂಲಕ್ಕಾಗಿ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸಮೀಪದ ಕೆಂಪವಾಡ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಗಮನಾಥ ಅರ್ಬನ್ ಸೌಹಾರ್ದ ಸಹಕಾರಿ ಸಂಸ್ಥೆಯ ಎರಡನೇ ಶಾಖೆ ಉದ್ಘಾಟಿಸಿ ಮಾತನಾಡಿ, ೫೧೦ ಕೋಟಿ ರೂ. ವೆಚ್ಚದಲ್ಲಿ ಕೃಷಿ ಕಾಲೇಜಿಗೆ ಭೂಮಿಪೂಜೆ ನೆರವೇರಿಸಲಾಗುವುದು. ಶ್ರೀ ಬಸವೇಶ್ವರ ಏತ ನೀರಾವರಿ ಯೋಜನೆ ಉಳಿದ ಕಾಮಗಾರಿಗೆ ಹಣ ನೀಡಲು ಸಿಎಂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಮಾತನಾಡಿ, ಸಂಸ್ಥೆ ಉನ್ನತಮಟ್ಟಕ್ಕೆ ಕೊಂಡೊಯ್ಯುವ ಗುರುತರ ಜವಾಬ್ದಾರಿ ಆಡಳಿತ ಮಂಡಳಿ ಮೇಲಿದೆ. ಠೇವಣಿದಾರ, ಶೇರುದಾರ ಹಾಗೂ ಸಾಲಗಾರರ ಹಿತ ಕಾಪಾಡಬೇಕು ಎಂದರು.
ಕವಲಗುಡ್ಡ ಸಿದ್ದಾಶ್ರಮದ ಅಮರೇಶ್ವರ ಸ್ವಾಮೀಜಿ ಮಾತನಾಡಿದರು. ಅಥಣಿ ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸ್ಥೆ ಅಧ್ಯಕ್ಷ ಮಲ್ಲೇಶ ಸವದಿ ಪ್ರಾಸ್ತಾವಿಕ ಮಾತನಾಡಿದರು.
ಕೃಷ್ಣಾ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಶಂಕರ ವಾಗಮೋಡೆ, ಕೆಂಪವಾಡ ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ಶೇಮಡೆ, ಮಲ್ಲೇಶ ಸವದಿ, ರಾಮಗೌಡ ಗುಮ್ತಾಜ್, ಶಿವಾನಂದ ಗೋಲಬಾವಿ, ಮಹಾದೇವ ನಾಗನೂರ, ಶಶಿಕಾಂತ ಹುಲಕುಂದ, ರಾಜು ತೇಲಿ, ರಮೇಶ ಪಟ್ಟಣ, ಬಸವರಾಜ ಭೂಸಣ್ಣವರ, ಎಲ್ಲಪ್ಪ ಕಲಾಲ, ಸುರೇಶ ತೇಲಿ, ರಮೇಶ ತೇಲಿ, ಮಾರುತಿ ತೇಲಿ, ಕಲಗೌಡ ಪಾಟೀಲ, ಬಾಬಣ್ಣ ಸಾವಂತ, ಭೀಮಪ್ಪ ಬಂಡಿಗಾರ, ಅಪ್ಪಾಸಾಹೇಬ ಕನ್ನವಾಡಿ ಇತರರು ಇದ್ದರು.