ಕಾಗವಾಡ: ದೇಶದಲ್ಲಿ ೪೦ ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಅಂದಾಜು ೮೦ ಸಾವಿರ ಕೋಟಿ ರೂ. ಠೇವಣಿಯೊಂದಿಗೆ ಸಾವಿರಾರು ಜನರಿಗೆ ಸಹಕಾರಿ ಉದ್ಯೋಗ ಕಲ್ಪಿಸಿದೆ ಎಂದು ಶಾಸಕ ಲಕ್ಷ್ಮಣ ಸವದಿ ತಿಳಿಸಿದರು.
ತಾಲೂಕಿನ ಉಗಾರ ಬದ್ರುಕ್ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿವಿಧೋದ್ದೇಶಗಳ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಶತಮಾನೋತ್ಸವ ನೆನಪಿಗಾಗಿ ನಿರ್ಮಿಸಿದ ಶತಮಾನೋತ್ಸವ ಕಟ್ಟಡ ಉದ್ಘಾಟಿಸಿ ಮಾತನಾಡಿ, ಅಥಣಿ ತಾಲೂಕಿನಲ್ಲಿರುವ ೧೫೪ ಸಹಕಾರಿ ಸಂಘಗಳು ಪ್ರಗತಿಯಲ್ಲಿ ಸಾಗುತ್ತಿವೆ. ಸಹಕಾರಿಯ ಅಧ್ಯಕ್ಷ ಶೀತಲ ಪಾಟೀಲ ಮಾಡಿರುವ ಸಾಧನೆ ಅಮೋಘವಾಗಿದೆ ಎಂದರು.
ಶಾಸಕ ರಾಜು ಕಾಗೆ ಮಾತನಾಡಿದರು. ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಧವಲಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಯತೀಸ್ವರಾನಂದ ಸ್ವಾಮೀಜಿ, ಅಮರೇಶ್ವರ ಸ್ವಾಮೀಜಿ, ಆನಂದರಾವ್ ಅಪ್ಪಾಸಾಹೇಬ ಜಾಧವ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.
ಮಾಜಿ ಶಾಸಕ ಮೋಹನ್ ಶಹಾ, ಡಿಸಿಸಿ ಬ್ಯಾಂಕ್ ಉಪಪ್ರಧಾನ ವ್ಯವಸ್ಥಾಪಕ ಶಿವಪುತ್ರ ಬಾಗೇವಾಡಿ, ಡಿಸಿಸಿ ಬ್ಯಾಂಕ್ ತಾಲೂಕು ನಿಯಂತ್ರಣಾಧಿಕಾರಿ ಶಂಕರ ನಂದೇಶ್ವರ, ಬ್ಯಾಂಕ್ ನಿರೀಕ್ಷಕ ಶಿವಾನಂದ ಬುರುಡ, ಇಂಜಿನಿಯರ್ ಆದಿನಾಥ ವಸವಾಡೆ, ಮುಖಂಡರಾದ ಕೆ.ಎ.ವನಜೋಳ, ರಾಜು ನಾಡಗೌಡ, ಅಭಯಕುಮಾರ ಅಕಿವಾಟೆ, ರವೀಂದ್ರ ಪೂಜಾರಿ, ಮುಕುಂದ ಪೂಜಾರಿ, ಅಮರ ದುರ್ಗನ್ನವರ, ಸಿದ್ದಪ್ಪ ಕನಾಳೆ, ಸುಭಾಷ ಪಾಟೀಲ ಇತರರಿದ್ದರು.