ಕೊಟ್ಟಲಗಿ ಗ್ರಾಮದ ಪಿಕೆಪಿಎಸ್ ನೂತನ ಉದ್ಘಾಟನಾ ಸಮಾರಂಭದಲ್ಲಿ ವಿಪ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿದರು. ಸಿದ್ಧಾರೂಢ ಸ್ವಾಮೀಜಿ, ಅಪ್ಪಾಸಾಬ ಬಿರಾದಾರ, ವಿಶ್ವನಾಥ ಗಣಿ, ಸಿದರಾಯ ಯಲಡಗಿ ಇತರರಿದ್ದರು. 
ಜಿಲ್ಲೆ

ಸಹಕಾರಿ ಸಂಘಗಳು ರೈತರ ಕಾಮಧೇನು

ಕೊಟ್ಟಲಗಿ: ಸಹಕಾರಿ ಸಂಘಗಳು ರೈತರಿಂದಲೇ ರೈತರಿಗೋಸ್ಕರ ರೈತರೇ ಕಟ್ಟಿ ಬೆಳೆಸುವ ರೈತರ ಆರ್ಥಿಕತೆ ಹೆಚ್ಚಿಸುವ ಕಾಮಧೇನುಗಳಾಗಿವೆ ಎಂದು ವಿಪ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೆ ಮತ್ತು ಸುವರ್ಣ ಮಹೋತ್ಸವದ ವರ್ಷಾಚರಣೆ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ತಾವು ಸಹಕಾರಿ ಮಂತ್ರಿ ಇದ್ದಾಗ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿ ಅನ್ನದಾತನ ಸಂಕಷ್ಟ ನೀಗಿಸುವ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.

ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಮಾತನಾಡಿ, ಕೃಷಿ ಎನ್ನುವುದು ವಿಶ್ವದ ಅತ್ಯಂತ ಪುರಾತನವಾದ ವೃತ್ತಿ. ಹಗಲು-ರಾತ್ರಿ ಎನ್ನದೆ ವರ್ಷದ 365 ದಿನವೂ ಕೃಷಿಕರು ಮತ್ತು ರೈತರು ನಮ್ಮ ಹೊಟ್ಟೆ ತುಂಬಿಸಲು ಸದಾಕಾಲ ದುಡಿಯುತ್ತಾರೆ. ಇಂತಹ ರೈತರಿಗೆ ಕಾಮಧೇನುವಾಗಿ ಕೆಲಸ ಮಾಡುತ್ತಿರುವ ಸಹಕಾರಿ ಸಂಘ ಉಳಿಸಿ ಬೆಳೆಸಿ ಎಂದರು. ಪಿಕೆಪಿಎಸ್ ಅಧ್ಯಕ್ಷ ಅಪ್ಪಾಸಾಬ ಬಿರಾದಾರ, ವಿಶ್ವನಾಥ ಗಣಿ, ಸಿದರಾಯ ಯಲಡಗಿ, ಗಿರಮಲ್ಲ ಬಡವಗೋಳ, ಅಡಿವೆಪ್ಪ ಪೊಪಡಿ, ವಿನೋಬಾ ದೊಡ್ಡನಿಂಗಪ್ಪಗೋಳ, ಸುನಂದಾ ಬ್ಯಾಳಿ, ಸತೀಶ ಉಪಾಸೆ, ಶಂಕರೆಪ್ಪ ಬಂಡರಗೋಟಿ, ನಿಂಗಪ್ಪ ಬೆಡರಟ್ಟಿ, ಗುರಪ್ಪ ಸತ್ತಿ, ಬಸವರಾಜ ಕುಂಬಾರ ಇತರರಿದ್ದರು.