ಅಫಜಲಪುರ: ಸಹಕಾರಿ ಸಂಘಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಅಲ್ಲದೆ ಸಂಘದ ಉತ್ಪನ್ನಗಳನ್ನು ರೈತರು ಖರೀದಿಸುವ ಬೆಂಬಲ ನೀಡಬೇಕು ಎಂದು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮಾನಕರ್ ಹೇಳಿದರು.
ಎಪಿಎಂಸಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ 49ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಸಿದ್ದಣ್ಣ ಕಾಗಿನಾಳ ಸಹಕಾರಿ ಕ್ಷೇತ್ರವನ್ನು ಬೆಳೆಸಿದರೆ, ತಾಲೂಕಿನಲ್ಲಿ ಶಾಸಕ ಎಂ.ವೈ.ಪಾಟೀಲï ಅವರು ಸಹಕಾರಿಗಳಿಗೆ ನೆರವಾಗಿದ್ದಾರೆ. ಸಂಘದಡಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಪ್ರಾರಂಭಿಸುವ ಚಿಂತನೆಯಿದೆ. ಇದರಿಂದ ಬಡವರಿಗೆ ಕೈಗೆಟುಕುವ ದರದಲ್ಲಿ ಔಷಧ ದೊರೆಯಲಿವೆ ಎಂದರು.
ಸAಘದ ಉಪಾಧ್ಯಕ್ಷ ಪಂಚಪ್ಪ ದೇವಣಿ ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ಪ್ರಮುಖರಾದ ಸಿದ್ದಯ್ಯ ಹಿರೇಮಠ, ಮಲ್ಲಪ್ಪ ಗುಣಾರಿ, ಸದಾಶಿವ ಮೇತ್ರಿ, ಸಿದ್ದಯ್ಯ ಹಿರೇಮಠ ಕರಜಗಿ, ಸಿದ್ರಾಮಪ್ಪ ಮನ್ಮಿ, ಅಂಬರೀಶ ಮೇತ್ರಿ, ಮಹಾಂತೇಶ ನೂಲಾ, ಎಸ್.ಎಸ್.ಪಾಟೀಲï, ನಬಿಲಾಲ್ ಮಾಶಾಳಕರ, ಶ್ರೀಕಾಂತ ಮಾಶಾಳಕರ, ವಿದ್ಯಾಧರ ಮಂಗಳೂರೆ, ಹಣಮಯ್ಯ ಗುತ್ತೇದಾರ್, ಬಾಬು ರಾಠೋಡ್, ಬಾಷಾಸಾಬ್ ಸರಡಗಿ, ಸೋನಾಲಿ ಯಾದವ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತೀಶ ಕಲಶೆಟ್ಟಿ, ಲೆಕ್ಕ ಪರಿಶೋಧಕ ರಮೇಶ ಬಿರಾದಾರ, ಲೆಕ್ಕಿಗ ಸಂಗಣ್ಣ ರೇವಪ್ಪ ಇತರರಿದ್ದರು.