ಜಿಲ್ಲೆ

ಸಹಕಾರಿ ಸಂಘ-ಸಂಸ್ಥೆಗಳ ಸೇವೆ ಶ್ಲಾಘನೀಯ

ಲಕ್ಷೆ್ಮೕಶ್ವರ: ಸಹಕಾರಿ ಸಂಘ-ಸಂಸ್ಥೆಗಳು ಬಡವರ, ಕೂಲಿಕಾರರ, ಕೃಷಿಕರ, ಸಣ್ಣ ವ್ಯಾಪಾರಸ್ಥರ ಏಳಿಗೆಗೆ ಸಹಕಾರಿಯಾಗಿದ್ದು, ಲಾಭ ನಷ್ಟಕ್ಕಿಂತ ಸೇವೆಗೆ ಪ್ರಾಮುಖ್ಯತೆ ನೀಡುವುದು ಸಹಕಾರಿ ಸಂಸ್ಥೆಗಳ ಧ್ಯೇಯ ವಾಗಿದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಹೇಳಿದರು.

ಶಿಗ್ಲಿಯಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಗಂಗಾಧರ ಮರ್ಚಂಟ್ಸ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಕಟ್ಟಡ ನಿರ್ವಣದ ಭೂಮಿಪೂಜೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ‘ಜನರು ನಂಬಿಕೆ ವಿಶ್ವಾಸದಿಂದ ವ್ಯವಹರಿಸುವ ಸಂಘ-ಸಂಸ್ಥೆಗಳು ಪ್ರಾಮಾಣಿಕ ಪ್ರಯತ್ನ, ಶ್ರಮದ ಮೂಲಕ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿ ಸಂಸ್ಥೆ ಬೆಳೆಯುವುದರ ಜತೆಗೆ ಜನರ ಸೇವೆಯೂ ಇಮ್ಮಡಿಗೊಳ್ಳಬೇಕು. ಲಿಂ.ಜ. ವೀರಗಂಗಾಧರ ಶ್ರೀಗಳ ಹೆಸರಿನಲ್ಲಿ ಸ್ಥಾಪಿತವಾಗುತ್ತಿರುವ ಸಂಸ್ಥೆ ಅಭಿವೃದ್ಧಿ ಪಥದತ್ತ ಸಾಗಲಿ’ ಎಂದು ಹಾರೈಸಿದರು. ಶಾಸಕ ರಾಮಣ್ಣ ಲಮಾಣಿ ಅಡಿಗಲ್ಲು ನೆರವೇರಿಸಿ ಮಾತನಾಡಿದರು. ಎಸ್.ವಿ. ಸಂಕನೂರ, ಸೊಸೈಟಿ ಅಧ್ಯಕ್ಷ ಸಿದ್ದಣ್ಣ ಯಲಿಗಾರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಎಸ್.ಪಿ. ಬಳಿಗಾರ, ಡಾ. ಆರ್.ಎನ್. ತೇಲಕರ, ಸುನೀಲ ಮಹಾಂತಶೆಟ್ಟರ್, ನಿಂಗಪ್ಪ ಹುನಗುಂದ , ಸೋಮಣ್ಣ ಡಾಣಗಲ್, ಡಿ.ವೈ. ಹುನಗುಂದ, ಸಿ.ಎಂ. ರಾಗಿ, ಈರಪ್ಪ ಬಳಿಗಾರ, ರಾಜರತ್ನ ಹುಲಗೂರ, ಬಸಣ್ಣ ಕರ್ಜಗಿ, ಶಿವಣ್ಣ ಕುರಿ, ಹನುಮಂತಪ್ಪ ತಳವಾರ. ಗೋವಿಂದಸಾ ಬದಿ, ಎಸ್.ಬಿ. ಮುಳಗುಂದಮಠ, ಎಸ್.ಎಚ್. ಪವಾಡದ, ಶಿವಪ್ಪ ಕೆಸರಳ್ಳಿ, ಶಂಭು ಅಂಬಲಿ ಇತರರಿದ್ದರು. ಬಸವರಾಜ ಕಳಸದ, ವೀರಣ್ಣ ಅಕ್ಕೂರ, ಬಿ.ಬಿ. ಬಳಿಗಾರ ನಿರ್ವಹಿಸಿದರು.