ಬೆಳಗಾವಿ: ಸೌಹಾರ್ದ ಸಹಕಾರಿ ಬ್ಯಾಂಕ್ಗಳ ಹಣಕಾಸಿನ ವಹಿವಾಟಿನ ಮೇಲೆೆ ಆಡಳಿತ ಮಂಡಳಿ ನಿಯಂತ್ರಣವಿದ್ದರೆ ಮಾತ್ರ ಬ್ಯಾಂಕ್ ಉಳಿಯಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಫೆಡರಲ್ ಕೋ&ಆಪರೇಟಿವ್ ಸಂಚಾಲಕ ಜಗದೀಶ ಕವಟಗಿಮಠ ಹೇಳಿದರು.
ನಗರದ ಕೋನ್ವಾಳ ಗಲ್ಲಿಯ ಲೋಕಮಾನ್ಯ ರಂಗಮಂದಿರದಲ್ಲಿ ಗುರುವಾರ ಅನ್ಮೋಲ್ ಮಲ್ಟಿ ಪರ್ಪಸ್ ಸೌಹಾರ್ದ ಸಹಕಾರಿ ಸಂದ 11ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಕಟ್ಟಕಡೆ ವ್ಯಕ್ತಿಗೆ ಆರ್ಥಿಕ ಸಾಲ ಸೌಲಭ್ಯ ಕಲ್ಪಿಸುತ್ತಿರುವ ಸಹಕಾರಿಗಳನ್ನು ಉಳಿಸಿ ಬೆಳೆಸುವುದು ಅವಶ್ಯ ಎಂದರು.
ದೇಶದ 140 ಕೋಟಿ ಜನಸಂಖ್ಯೆಯಲ್ಲಿ ಶೇ.20 ಜನರು ಮಾತ್ರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಶೇ.80 ಜನರು ಬ್ಯಾಂಕಿಂಗ್ ಕ್ಷೇತ್ರ ಬಿಟ್ಟು ಹೊರ ಉಳಿದಿದ್ದಾರೆ. ಹಾಗಾಗಿ ಇನ್ನೂ ತಳಮಟ್ಟಕ್ಕೆ ಹೋಗಿ ಜನರಿಗೆ ಬ್ಯಾಂಕಿನ ಸೌಲಭ್ಯ ಕಲ್ಪಿಸಬೇಕು. ಸಹಕಾರಿ ಸೌಹರ್ದಾ ಬ್ಯಾಂಕ್ಗಳು ಕೇವಲ ಠೇವಣಿ ಇಟ್ಟುಕೊಳ್ಳುವುದು, ಸಾಲ ನೀಡುವುದಕ್ಕೆ ಮಾತ್ರ ಸೀಮಿತಗೊಳ್ಳಬಾರದು. ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಬೇಕು ಎಂದರು.
ರಾಷ್ಟ್ರೀಕೃತ ಬ್ಯಾಂಕ್ಗಳು ದಿವಾಳಿಯಾದರೆ ಕೇಂದ್ರ ಸರ್ಕಾರ ಆರ್ಥಿಕ ಸಹಾಕರ ನೀಡುತ್ತದೆ. ಸಹಕಾರಿ ಸೌಹಾರ್ದ ಬ್ಯಾಂಕ್ಗಳು ಆರ್ಥಿಕ ದಿವಾಳಿಯಾದರೆ ಯಾವುದೇ ಸರ್ಕಾರ ಸಹಾಯಕ್ಕೆ ಬರುವುದಿಲ್ಲ. ನಮ್ಮನ್ನು ನಾವೇ ಸರಿಪಡಿಸಿಕೊಳ್ಳಬೇಕು. ಹಾಗಾಗಿ ನಿಯಮ ಮೀರಿ ಸಾಲ ಕೊಡಬೇಡಿ. ಶೇ.100 ಲಾಭದಲ್ಲಿ ಶೇ.50 ಲಾಭದ ಹಣ ಸಂಸ್ಥೆಯ ಹೆಸರಿನಲ್ಲಿ ಆಸ್ತಿ ಮಾಡಿ. ಬ್ಯಾಂಕಿಗೆ ಬಂದಿರುವ ಎಲ್ಲ ಲಾಭವನ್ನು ವ್ಯವಹಾರದಲ್ಲಿ ಬಳಸಬೇಡಿ. ಗ್ರಾಹಕರ ಠೇವಣಿ ಮೇಲೆ ಹೆಚ್ಚು ಅವಲಂಬಿತರಾಗಬೇಡಿ ಎಂದು ಹೇಳಿದರು.
ಸಹಕಾರಿ ಸಂದ ನಿವೃತ್ತ ಜಂಟಿ ರಿಜಿಸ್ಟ್ರಾರ್ ಶಿವು ಕುಲಕರ್ಣಿ ಮಾತನಾಡಿ, ಸಹಕಾರಿ ಸೌಹಾರ್ದ ಕ್ಷೇತ್ರದಲ್ಲಿ ಬ್ಯಾಂಕ್ಗಳ ನೆಲೆ ಗಟ್ಟಿಯಾಗಿ ನಿಲ್ಲಲು ಆಡಳಿತದಲ್ಲಿನ ಪಾರದರ್ಶಕತೆ ಮುಖ್ಯ ಪಾತ್ರ ವಹಿಸುತ್ತದೆ. ಸಹಕಾರಿ ವಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಎಂದರು. ಶ್ರೀ ಬಸವೇಶ್ವರ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ರಮೇಶ ಕಳಸಣ್ಣವರ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಅನ್ಮೋಲ್ ಮಲ್ಟಿ ಪರ್ಪಸ್ ಸೌಹಾರ್ದ ಸಹಕಾರಿ ಸಂದ ಸಾಧನೆ ದೊಡ್ಡದಿದೆ. ಗ್ರಾಹಕರ ಆರ್ಥಿಕ ಸ್ಥಿತಿಗತಿ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಅಧ್ಯಕ್ಷ ದೇವೇಂದ್ರ ಬನ್ಸಲ್, ಉಪಾಧ್ಯಕ್ಷ ಸಂಜಯ ಪಂಡಿತ, ಆಡಳಿತ ಮಂಡಳಿ ನಿರ್ದೇಶಕರಾದ ಸಂಜಯ ವಾಲಾವಲಕರ, ಪ್ರಸಾದ ಹಿರೇಮಠ, ನೇಮಿನಾಥ ಹರದಿ, ಬಸವರಾಜ ಗಸ್ತಿ, ಮಹಮ್ಮದ ಫೈಯಾಜ್ ಮಾರಫಾನಿ, ತಾನಾಜಿ ಕವಟನಕರ, ಶ್ರೀಕಾಂತ ಅಳ್ಳನವರ, ರಮೇಶ ಕಾಳೆ, ಸುಚಿತಾ ಮಹಾಂತಶೆಟ್ಟಿ, ಸಾ ತುಡಯೆಕರ ಇತರರಿದ್ದರು.