ಪಾಂಡವಪುರ ತಾಲೂಕಿನ ಬನ್ನಂಗಾಡಿ ಹಾಲು ಉತ್ಪಾದಕರಿಗೆ ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಸಬ್ಸಿಡಿ ದರದಲ್ಲಿ ರಬ್ಬರ್ ಮ್ಯಾಟ್ ವಿತರಿಸಿದರು. ಆರ್.ಪ್ರಸಾದ್, ಉಷಾ, ಚಂದ್ರಶೇಖರ್, ಕರೀಗೌಡ, ಪ್ರಸನ್ನ, ಪವಿತ್ರಾ, ಹುಚ್ಚೇಗೌಡ, ಶ್ರೀನಿವಾಸ್ ಇದ್ದರು.  
ಜಿಲ್ಲೆ

ಸಹಕಾರ ಸಂಘದಲ್ಲಿ ರಾಜಕೀಯ ನುಸುಳದಿರಲಿ

ಪಾಂಡವಪುರ: ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರಾಜಕೀಯ ನುಸಳದಂತೆ ಎಚ್ಚರ ವಹಿಸಿದರೆ ಡೇರಿ ಬೆಳವಣಿಗೆ ಹೊಂದುತ್ತದೆ ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.

ತಾಲೂಕಿನ ಬನ್ನಂಗಾಡಿ ಹಾಲು ಉತ್ಪಾದಕರಿಗೆ ಸೋಮವಾರ ಸಬ್ಸಿಡಿ ದರದಲ್ಲಿ ರಬ್ಬರ್ ಮ್ಯಾಟ್ ವಿತರಿಸಿ ಮಾತನಾಡಿ, ಕಾರ್ಯದರ್ಶಿ ಮತ್ತು ಸಂಘದ ಆಡಳಿತ ಮಂಡಳಿ ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಅದಕ್ಕೆ ಪ್ರತಿಫಲ ಪಡೆದುಕೊಳ್ಳಬಹುದು. ಒಕ್ಕೂಟ ಹಾಲು ಉತ್ಪಾದಕರ ಜತೆ ಬೆರೆತು ಕೆಲಸ ಮಾಡುತ್ತಿದೆ. ಸಂಸ್ಥೆಯ ಅನ್ನ ತಿಂದವರು ಅದಕ್ಕೆ ದ್ರೋಹ ಮಾಡುವ ಕೆಲಸ ಮಾಡಬಾರದು ಎಂದರು.

ಸರ್ಕಾರ ಮರು ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ತಾಲೂಕಿನಲ್ಲಿ ಯಶಸ್ವಿನಿ ಯೋಜನೆ ಕುಂಠಿತವಾಗಿದೆ. ಆರೋಗ್ಯದಲ್ಲಿ ಏರುಪೇರು, ಅಪಘಾತ ಇತರ ಕಷ್ಟ ಕಾಲದಲ್ಲಿ ಯಶಸ್ವಿನಿ ಯೋಜನೆಯಿಂದ ಅನುಕೂಲವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮನ್‌ಮುಲ್ ಉಪವ್ಯವಸ್ಥಾಪಕ ನಿರ್ದೇಶಕ ಆರ್.ಪ್ರಸಾದ್, ಮಾರ್ಗ ವಿಸ್ತರಣಾಧಿಕಾರಿ ಉಷಾ, ಡೇರಿ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಕರೀಗೌಡ, ಕಾರ್ಯದರ್ಶಿ ಪ್ರಸನ್ನ, ಗಿರಿಯಾರಹಳ್ಳಿ ಡೇರಿ ಕಾರ್ಯದರ್ಶಿ ಪವಿತ್ರಾ, ಗ್ರಾಮದ ಮುಖಂಡರಾದ ಹುಚ್ಚೇಗೌಡ, ಶ್ರೀನಿವಾಸ್ ಇತರರು ಇದ್ದರು.