ಸಿದ್ದಾಪುರ: ಗುಹ್ಯ ಅಗಸ್ತೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ಶಾಸಕ ಎ.ಎಸ್.ಪೊನ್ನಣ್ಣ ಸೋಮವಾರ ಉದ್ಘಾಟಿಸಿದರು.
ನೂತನ ಕಟ್ಟಡದ ವಿನ್ಯಾಸದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಶಾಸಕರು, ಸಹಕಾರ ಸಂಘವು ಮತ್ತಷ್ಟು ಯಶಸ್ಸನ್ನು ಕಾಣುವಂತಾಗಲಿ ಎಂದು ಶುಭ ಹಾರೈಸಿದರು. ಗುಹ್ಯ ಅಗಸ್ತೇಶ್ವರ ಸಹಕಾರಿ ಸಂಘದ ಬೆಳವಣಿಗೆ ಹಾಗೂ ಏಳಿಗೆಗೆ ಶ್ರಮಿಸುತ್ತಿರುವ ಸಂಘದ ಅಧ್ಯಕ್ಷರು, ನಿರ್ದೇಶಕರನ್ನು ಶ್ಲಾಘಿಸಿ ಸಂಘದ ಸದಸ್ಯರ ಏಳಿಗೆಗೆ ಮತ್ತಷ್ಟು ಕಾರ್ಯಕ್ರಮಗಳನ್ನು ರೂಪಿಸಿ, ಕಾಳಜಿ ವಹಿಸುವಂತೆ ಸಲಹೆ ನೀಡಿದರು.
ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಗೋಪಾಲ್, ಉಪಾಧ್ಯಕ್ಷ ಪಲನಿ ಸ್ವಾಮಿ, ಸಂಘದ ಅಧ್ಯಕ್ಷ ಎಂ.ಎಸ್.ವೆಂಕಟೇಶ್,
ಉಪಾಧ್ಯಕ್ಷ ಎಂ.ಬಿಜಾಯ್, ಸದಸ್ಯರಾದ ಎಸ್.ಬಿ.ಪ್ರತೀಶ್, ವಾಸು, ಚಂದ್ರನ್, ಸಹಕಾರಿ ಸಂಘದ ಸಿಬ್ಬಂದಿ, ಸದಸ್ಯರು, ಗ್ರಾಮದ ಪ್ರಮುಖರು ಹಾಜರಿದ್ದರು.