ಚಿತ್ರದುರ್ಗ: ನಗರದ ವಿಶ್ವಮಾನವ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘ ಸದಸ್ಯರ ಸಹಕಾರದಿಂದ ಅಭಿವೃದ್ಧಿಯತ್ತ ಸಾಗಿದೆ ಎಂದು ಸಂಘದ ಅಧ್ಯಕ್ಷ ಎಚ್.ಜಲೀಲ್‌ಸಾಬ್ ಹೇಳಿದರು.
ನಗರದ ಐಎಟಿ ಸಭಾಂಗಣದಲ್ಲಿ ಈಚೆಗೆ ನಡೆದ ಸಂಘದ ವಾರ್ಷಿಕಸಭೆ ಉದ್ಘಾಟಿಸಿ ಮಾತನಾಡಿದ ಅವರು,ಅಭಿವೃದ್ಧಿ ಹೊಂದುತ್ತಿರುವ ಈ ಸ ಂಘ ಪ್ರಗತಿಯತ್ತ ಮುನ್ನಡೆಯುತ್ತಿದ್ದು,ಮುಂದಿನ ದಿನಗಳಲ್ಲಿ ಲಾಭಾಂಶ ಕಾಣಬಹುದೆಂದು ಆಶಿಸಿದರು. 589 ಸದಸ್ಯರಿರುವ ಸಂಘದಲ್ಲಿ ಸಂ ಘದಲ್ಲಿ 7.95 ಸಾವಿರ ರೂ.ಷೇರು ಬಂಡವಾಳವಿದೆ. 4.51 ಲಕ್ಷ ರೂ.ಠೇವಣಿ,7.5 ಲಕ್ಷ ರೂ.ಸಾಲ ನೀಡಲಾಗಿದೆ. ಸಾಲಗಾರರು ಸಮಯಕ್ಕೆ ಸರಿಯಾಗಿ ಅಸಲು,ಬಡ್ಡಿ ಪಾವತಿಸಿ ಸಂಘದ ಏಳಿಗೆಗೆ ಕೈ ಜೋಡಿಸಬೇಕು.
ಠೇವಣಿಗೆ ಯಾವುದೇ ರೀತಿಯ ಧಕ್ಕೆ ಸಂಘ ಕಾರ‌್ಯನಿರ್ವಹಿಸಲಿದೆ. ಈ ಕುರಿತು ಅನುಮಾನ ಬೇಡ. ಚಳ್ಳಕೆರೆ ಹಿರಿಯೂರು ಹಾಗೂ ಚಿಕ್ಕಜಾಜೂರಲ್ಲಿ ಶಾಖೆಗಳ ಆರಂಭಕ್ಕೆ ಉದ್ದೇಶಿಸಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಎಸ್.ರಶೀದ್,ನಿರ್ದೇಶಕರಾದ ಸಿ.ಇಮಾಂಸಾಬ್,ಎಚ್.ಮೌಲಾನ ತಾಳವಟ್ಟಿ,ಇ.ಮಹಮದ್‌ಅಲಿ,ಜಿ.ಸುಭಾನು,ಎಚ್. ಅಬ್ದುಲ್‌ಲತೀಫ್,ಷೇಕ್‌ಬುಡೇನ್‌ಸಾಬ್,ಎಂ.ಜಿ.ಶಫಿವುಲ್ಲಾ,ಪಿ.ದಾದಾವಲಿ,ಪಿ.ಬಷೀರ್‌ಅಹಮದ್,ಟಿ.ಮೆಹಬೂಬ್,ಜಿ.ದಾದಾ ಬುಡೇ ನ್‌ಸಾಬ್,ಎಂ.ಅಬ್ದುಲ್‌ಕಲಾಂ,ಪಿ.ಸಲೀಮಾ,ಜಹರಾಬಿ,ಕಾರ‌್ಯದರ್ಶಿ ವಿ.ಸಿಂಧು ಇದ್ದರು.