ಗವನಾಳದಲ್ಲಿ ಹಮ್ಮಿಕೊಂಡಿದ್ದ ರಮಾಬಾಯಿ ಅಂಬೇಡ್ಕರ್ ಸಹಕಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು.ಮಹಾವೀರ ಮೋಹಿತೆ, ಲಕ್ಷ್ಮಣರಾವ್ ಚಿಂಗಳೆ, ಇಲಿಯಾಸ್ ಇನಾಮದಾರ ಇತರರಿದ್ದರು. 
ಜಿಲ್ಲೆ

ಸಹಕಾರ ಸಂಘಗಳು ಬಡವರ ಜೀವನಾಡಿ

ಸಂಕೇಶ್ವರ: ಬಡವರು, ಮಧ್ಯಮ ವರ್ಗ, ಕಿರು ಉದ್ದಿಮೆದಾರರು, ಸಣ್ಣ-ಪುಟ್ಟ ವ್ಯಾಪಾರಸ್ಥರು, ಕೂಲಿಕಾರರಿಗೆ ಬೆನ್ನೆಲುಬಾಗಿ ನಿಂತು, ಅವರ ಆರ್ಥಿಕ ಪರಿಸ್ಥಿತಿ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಹಕಾರ ಸಂಘಗಳು ಜನರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸಮೀಪದ ಗವನಾಳದಲ್ಲಿ ಈಚೆಗೆ ರಮಾಬಾಯಿ ಅಂಬೇಡ್ಕರ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಸ್ಥೆಗಳ ಉತ್ತೇಜನಕ್ಕೆ ಸರ್ಕಾರ ಬದ್ಧವಿದೆ ಎಂದರು.

ಗ್ರಾಹಕರು ಮತ್ತು ಆಡಳಿತ ಮಂಡಳಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಹಕಾರಿ
ಸಂಸ್ಥೆಗಳಿಗೆ ಗ್ರಾಹಕರ ಹಿತರಕ್ಷಣೆ ಮುಖ್ಯ ಧ್ಯೇಯವಾಗಬೇಕು. ಆಡಳಿತ ಮಂಡಳಿ ಸೂಕ್ತ ನಿರ್ಧಾರ ಮತ್ತು ಮಾರ್ಗದರ್ಶನ, ಸಿಬ್ಬಂದಿ ಪ್ರಾಮಾಣಿಕ ಸೇವೆ, ಗ್ರಾಹಕರ ಸಹಕಾರದಿಂದ ಈ ಸಂಸ್ಥೆ ಅಭಿವದ್ಧಿ ಹೊಂದಲಿ ಎಂದು ಹಾರೆಸಿದರು.

ಬಸವಬೆಳವಿ ಚರಮೂರ್ತಿ ಚರಂತೇಶ್ವರ ವಿರಕ್ತಮಠದ ಶರಣಬಸವ ಸ್ವಾಮೀಜಿ ಸಾನ್ನಿಧ್ಯ, ಅಧ್ಯಕ್ಷ ಶ್ರೀನಿವಾಸ ವ್ಯಾಪಾರಿ ಅಧ್ಯಕ್ಷತೆ ವಹಿಸಿದ್ದರು. ಮಹಾವೀರ ಮೋಹಿತೆ, ಲಕ್ಷ್ಮಣರಾವ್ ಚಿಂಗಳೆ, ಇಲಿಯಾಸ ಇನಾಮದಾರ, ಮಲ್ಲಿಕಾರ್ಜುನ ರಾಶಿಂಗೆ, ದಿಲೀಪ್ ಹೊಸಮನಿ, ಸಂತೋಷ ಮುಡಸಿ, ಮಹಾಂತೇಶ ಮಗದುಮ್ಮ, ಸಂಜು ಜೀವಣ್ಣವರ, ಸಿಇಒ ಚಂದ್ರಕಾಂತ ಜೋರೆ ಇತರರಿದ್ದರು. ಉಪಾಧ್ಯಕ್ಷ ಸುರೇಶ ಮರಡಿ ಸ್ವಾಗತಿಸಿದರು. ದೀಪಾ ಮೇಲಗಿರಿ ವಂದಿಸಿದರು.