ಕಬ್ಬೂರ: ರೈತರ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರ ಮುಖ್ಯವಾಗಿದೆ. ಸಹಕಾರಿ ಸಂಘಗಳಲ್ಲಿ ರೈತರು ಬೆಳೆ ಸಾಲಕ್ಕೆ ಸೀಮಿತವಾಗದೆ ಶೇ.೩ ಬಡ್ಡಿದರದಲ್ಲಿ ಪೈಪ್‌ಲೈನ್, ಹೈನುಗಾರಿಕೆ, ಟ್ರ್ಯಾಕ್ಟರ್ ಸಾಲ ಪಡೆದು ಅಭಿವೃದ್ಧಿ ಹೊಂದಬೇಕು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ಹೇಳಿದರು.
ಸಮೀಪದ ಜೋಡಹಟ್ಟಿ ಗ್ರಾಮದಲ್ಲಿ ನಿರ್ಮಿಸಿದ ಶ್ರೀ ಬೀರೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಟ್ಟಡ ಬುಧವಾರ ಉದ್ಘಾಟಿಸಿ ಮಾತನಾಡಿ, ಸಂಘದಲ್ಲಿರುವ ಧರ್ಮಾರ್ಥ ನಿಧಿ ಹಾಗೂ ಶಿಕ್ಷಣ ನಿಧಿಗಳ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಕವಲಗುಡ್ಡಮಠದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಮಾತನಾಡಿದರು. ಶಾಸಕ ದುರ್ಯೋಧನ ಐಹೊಳೆ, ಮುಖಂಡ ಸುರೇಶ ಬೆಲ್ಲದ, ಸಂಘದ ಅಧ್ಯಕ್ಷ ಕಲ್ಲಪ್ಪ ಕರಗಾವಿ, ಎಂ.ಕೆ.ಪೂಜೇರಿ, ಬಿ.ಎಸ್.ಮಾಳಿಂಗೆ, ಆನಂದ ಸಾಹುಕಾರ, ಮಹೇಶ ಬೆಲ್ಲದ, ಸುನೀಲ ಇನಾಮದಾರ, ಡಾ.ಆರ್.ಕೆ.ಬಾಗಿ, ಮಹಾದೇವ ಜಿವನಿ, ರವೀಂದ್ರ ಅಲಗೂರೆ, ಶೀಶೈಲ ತಲ್ಲೂರ, ಬಿ.ಎಸ್.ಉತ್ತೂರೆ, ನಿಲಕಂಠ ಚಿಕ್ಕೋಡಿ ಇತರರಿದ್ದರು.