ಚಿಕ್ಕಮಗಳೂರು: ಬಡ ಜನಾಂಗದ ಅಭಿವೃಧ್ದಿಗೆ ನಿರ್ಮಿತಗೊಂಡಿರುವ ಪರಿಶಿಷ್ಟÀ ಸಹಕಾರ ಸಂಘದಲ್ಲಿ ಇನ್ನಷ್ಟು ಹೆಚ್ಚು ಮಂದಿ ಸದಸ್ಯರಾಗುವ ಮೂಲಕ ಸಮಾಜದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಕರೆ ನೀಡಿದರು.
ನಗರದ ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಗೌತಮಬುದ್ಧ ಪರಿಶಿಷ್ಟ ಜಾತಿ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಂಘದಲ್ಲಿ ೮೦೦ಕ್ಕೂ ಹೆಚ್ಚು ಮಂದಿ ಸದಸ್ಯರುಗಳು ೨೨ ಲಕ್ಷ ರೂ.ಗಳ ವಹಿವಾಟು ನಡೆಸುತ್ತಿರುವುದು ಸ್ವಾಗತಾರ್ಹ. ಕೇವಲ ಐದು ವರ್ಷದ ಹಿಂದೆ ಸ್ಥಾಪಿತಗೊಂಡಿರುವ ಸಹಕಾರ ಸಂಘವು ಏರುಪೇರಿನ ನಡುವೆ ಪ್ರತಿವರ್ಷವು ಮುಂಚೂಣಿಯತ್ತ ಸಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸAಘವು ಆರ್ಥಿಕ ಅಭಿವೃದ್ಧಿ ಹೊಂದಲು ಓರ್ವನಿಂದ ಸಾಧ್ಯವಿಲ್ಲ. ಪರಸ್ಪರ ಸಹಕಾರ ನೀಡಿ ಆಂದೋಲನವನ್ನು ನಡೆಸಬೇಕಿದೆ. ಜೊತೆಗೆ ಎಸ್‌ಬಿ ಖಾತೆ ತೆರೆಯುವಿಕೆ, ಎಫ್‌ಡಿ ಕಲೆಕ್ಷನ್ ಮುಖಾಂತರ ವಹಿವಾಟು ಮಾಡಿಕೊಂಡು ಡಿಸಿಸಿ ಬ್ಯಾಂಕ್‌ನಲ್ಲಿ ಇರುವಂಥ ಷೇರುಧನಕ್ಕೆ ಸಮನಾದ ಸಾಲಸೌಲಭ್ಯ ಪಡೆದುಕೊಂಡು ಸದಸ್ಯರಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಸಹಕಾರ ಸಂಘದ ಅಧ್ಯಕ್ಷ ಜಿ.ಕೆ.ಬಸವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ಪ್ರತಿ ಗ್ರಾಮ ಮಟ್ಟದಲ್ಲಿ ಪದಾಧಿಕಾರಿಗಳು ಪರಿಶಿಷ್ಟರನ್ನು ಭೇಟಿ ಮಾಡಿ ಸದಸ್ಯರಾಗಿಸುವ ನಿಟ್ಟಿನಲ್ಲಿ ಪ್ರಚಾರ ಮಾಡಲಾಗುತ್ತಿದೆ. ಸಮಾಜದ ಬಾಂಧವರು ಹೆಚ್ಚಿನ ವ್ಯವಹಾರ ನಡೆಸುವ ಜೊತೆಗೆ ಷೇರುಗಳನ್ನು ಹೊಂದಬೇಕು ಎಂದು ತಿಳಿಸಿದರು.
ಪ್ರಸ್ತುತ ಸಂಘದಲ್ಲಿ ೧೦ ಲಕ್ಷ ರೂ.ಗಳಷ್ಟು ಸಾಲಸೌಲಭ್ಯವನ್ನು ಒದಗಿಸಿದ್ದು, ವಸೂಲಾತಿ ಕಾರ್ಯವು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಒಟ್ಟಾರೆ ಪ್ರತಿವರ್ಷವು ಸಹಕಾರ ಸಂಘವು ಆರ್ಥಿಕ ಲಾಭಾಂಶವನ್ನು ಹೊಂದುವ ಮೂಲಕ ಮುನ್ನೆಡೆ ಸಾಧಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಗೌರವ ಕಾರ್ಯದರ್ಶಿ ಹಂಪಯ್ಯ, ಉಪಾಧ್ಯಕ್ಷ ಬಿ.ಎಂ.ಶAಕರ್, ನಿರ್ದೇಶಕರಾದ ಪಿ.ವೇಲಾಯುಧನ್, ಕೆ.ಎಂ.ಗೋಪಾಲ್, ಎಲ್.ಶಾಂತಕುಮಾರ್, ಎ.ನಾಗರಾಜ್, ಎಂ.ಟಿ. ಲೋಕೇಶಪ್ಪ, ಎಂ.ಆರ್.ಗAಗಾದರ್, ಎಚ್.ಜೆ.ಪರಮೇಶ್ವರಪ್ಪ, ಕೆ.ನಾಗರಾಜ್, ಎಂ.ಎಸ್.ವೆAಕಟೇಶ್, ಕೆ.ಟಿ.ಶ್ರೀನಿವಾಸ್, ಸುರೇಂದ್ರ ಬಾಬು, ಪಾರ್ವತಮ್ಮ, ರೇಣುಕಾ ಮತ್ತಿತರರಿದ್ದರು.