ಜಿಲ್ಲೆ

ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ


ಕೊಡಗು : ಸಿದ್ದಾಪುರ ಗುಯ್ಯ ಅಗಸ್ತೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಎಸ್.ವೆಂಕಟೇಶ್ 6ನೇ ಬಾರಿಗೆ, ಉಪಾಧ್ಯಕ್ಷರಾಗಿ ಎಂ.ಬಿಜೋಯ್ 3ನೇ ಬಾರಿಗೆ ಅವಿರೋಧ ಆಯ್ಕೆಯಾದರು.


ಸಹಕಾರ ಸಂಘದ ಕಟ್ಟಡದ ಸಭಾಂಗಣದಲ್ಲಿ ಇತ್ತೀಚೆಗೆ ಚುನಾವಣೆಯಲ್ಲಿ ನಡೆಯಿತು. ಈ ವೇಳೆ ಇಬ್ಬರನ್ನೂ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಿರ್ದೇಶಕರಾಗಿ ಕೆ.ಕೆ.ಚಂದ್ರಕುಮಾರ್, ಪಿ.ಕೆ.ಚಂದ್ರನ್, ಶಿಬುಚಾಕೋ, ಕೆ.ಎಸ್.ಸುನೀಲ್, ದೇವಯಾನಿ, ಪ್ರಮೀಳಾ, ಎಸ್.ಬಿ.ಪ್ರತೀಶ್, ಬಶೀರ್, ಕೆ.ಸಿ.ಮಿಲನ್, ಚೆಲುವಯ್ಯ, ವಾಸು ಚುನಾಯಿತರಾದರು.