ಜಿಲ್ಲೆ

ಸಹಕಾರ ಧ್ವಜ ಹಾರಿಸಲು ಸೂಚನೆ

ಚಾಮರಾಜನಗರ: 71ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ನವೆಂಬರ್ 14 ರಿಂದ 20ರವರೆಗೆ ಏಳು ದಿನಗಳ ಕಾಲ ಜಿಲ್ಲೆಯಲ್ಲಿ ಆಚರಿಸುತ್ತಿದ್ದು, ಈ ಸಂಬಂಧ ಏಳು ದಿನಗಳವರೆಗೆ ಸಹಕಾರ ಸಂಘ, ಸೌಹಾರ್ದ ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕುಗಳು ಸಂಘದ ಕಟ್ಟಡಗಳ ಮೇಲೆ ಸಹಕಾರ ಧ್ವಜವನ್ನು ಕಡ್ಡಾಯವಾಗಿ ಹಾರಿಸುವಂತೆ ಸೂಚಿಸಲಾಗಿದೆ.

ಸಹಕಾರ ಧ್ವಜ ಇಲ್ಲದೆ ಇರುವ ಸಂಘದವರು ಜಿಲ್ಲಾ ಸಹಕಾರ ಸಂಘ ಒಕ್ಕೂಟ ನಿಯಮಿತ ಚಾಮರಾಜನಗರ ಇವರನ್ನು ಸಂಪರ್ಕಿಸಿ ಪಡೆಯಬಹುದು ಎಂದು ಸಹಕಾರ ಸಂಘಗಳ ಉಪನಿಬಂಧಕ ಜಿ.ಸಿ ಜ್ಯೋತಿ ಅರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.