ಬೀದರ್: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಸಸಿ ನೆಡುವ ಮೂಲಕ ತಾಲ್ಲೂಕಿನ ಯಾಕತಪುರ ಗ್ರಾಮ ಪಂಚಾಯಿತಿ ಸದಸ್ಯ ನರಸಪ್ಪ ಯಾಕತಪುರ ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಮನ್ನಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ, ಸಂವಿಧಾನ ಪೀಠಿಕೆ ಹಾಗೂ ನೆನಪಿನ ಕಾಣಿಕೆ ಕೊಟ್ಟು ಸತ್ಕರಿಸಿದರು. ಶಾಲೆ ಆವರಣದಲ್ಲಿ 20 ಸಸಿಗಳನ್ನು ನೆಟ್ಟರು.
ಪ್ರಾಚಾರ್ಯ ತುಕಾರಾಮ ಯಾತಪ್ಪ, ಸಾಮಾಜಿಕ ಕಾರ್ಯಕರ್ತ ರಾಹುಲ್ ಮಿಶ್ರಾ, ಸಂಜುಕುಮಾರ ಕೋಲಿ, ಗೌಸೊದ್ದಿನ್, ರೂಬಿನ್ ಹಾಗೂ ಶಿಕ್ಷಕರು ಇದ್ದರು.