ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮೆಡಿಕಲ್ ಕಾಲೇಜು ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಸವಿತಾ ಸಮಾಜದ ಬಗ್ಗೆ ನಿಷೇಧಿತ ಪದ ಬಳಕೆ ಮಾಡಿರುವುದು ಖಂಡನಾರ್ಹ. ಕೂಡಲೇ ಅವರು ಈ ಬಗ್ಗೆ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಸಿಡಿಎ ನಾಮನಿರ್ದೇಶಿತ ಸದಸ್ಯ ರಾಘವೇಂದ್ರ ಎಚ್ಚರಿಕೆ ನೀಡಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ಮತ್ತು ಅರ್ಹತೆ, ಯೋಗ್ಯತೆ ನೀಡಲಾಗಿದೆ. ಇದೀಗ ಸಿ.ಟಿ.ರವಿ ಅವರು ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ. ವಿಡಿಯೋ ಮತ್ತು ಧ್ವನಿಮುದ್ರಿಕೆಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದರೆ ಸತ್ಯ ತಿಳಿಯುತ್ತದೆ ಎಂದರು.
ಸಿ.ಟಿ.ರವಿ ಅವರು ಸವಿತಾ ಸಮಾಜದ ಬಗ್ಗೆ ನಿಷೇಧಿತ ಪದ ಬಳಕೆ ಮಾಡಿರುವ ಕುರಿತು ಸಮಾಜದ ಜಿಲ್ಲಾ ಮಟ್ಟದ ನಾಯಕರೊಂದಿಗೆ ಚರ್ಚಿಸಲಾಗಿದೆ. ರಾಜ್ಯ ನಾಯಕರಿಗೂ ವಿಷಯ ತಿಳಿಸಿz್ದೆÃವೆ. ಹೋರಾಟ ರೂಪಿಸಿದರೆ ಹಲವು ಜನಪರ ಸಂಘಟನೆಗಳು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಸಿ.ಟಿ. ರವಿ ಹೇಳುವ ಹಾಗೆ ಎಲ್ಲಿ ಕಳೆದುಕೊಂಡಿz್ದÉÃನೊ ಅಲ್ಲೇ ಪಡೆಯಬೇಕು ಎಂಬAತೆ ಅವರು ಎಲ್ಲಿ ಮಾತನಾಡಿದ್ದಾರೋ ಅಲ್ಲೇ ಬಹಿರಂಗ ಕ್ಷಮೆ ಕೇಳಬೇಕು. ಈ ಪದಬಳಕೆಯಿಂದ ಸವಿತಾ ಮಹರ್ಷಿಗಳಿಗೆ ಮತ್ತು ವಿಶ್ವಗುರು ಬಸವಣ್ಣನವರ ಅನುಭವ ಮಂಟಪದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಶಿವಶರಣ ಹಡಪದ ಅಪ್ಪಣ್ಣ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.
ಸವಿತಾ ಸಮಾಜದವರೂ ಹಿಂದೂಗಳೆ. ನಾವೂ ಸಹ ದೇವರಿಗೆ ದೀಪ ಹಚ್ಚುತ್ತೇವೆ. ಹಿಂದೂತ್ವ ಎಂದು ಹೇಳುವ ಸಿ.ಟಿ. ರವಿ ಮಾನಸಿಕ ಸ್ಥಿಮಿತ ಕಳೆದುಕೊಂಡು ನಿಷೇಧಿತ ಪದ ಬಳಸಿ ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ್ದಾರೆ. ನಿಮ್ಮ ಆಡಂಬರದ ಹಿಂದುತ್ವ ಇದರಲ್ಲಿ ಎದ್ದುಕಾಣುತ್ತಿದೆ. ನಾನು ಅವನಾ ಎಂದು ಹೇಳಿರುವ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಸಿ.ಟಿ ರವಿ ಅವರು ಸೋಲಿನ ಹತಾಶೆಯಿಂದ ಹೊರಬರಲಾಗದೆ ಮಾನಸಿಕ ಸ್ಥಿಮಿತ ಕಳೆದುಕೊಂಡು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮಹಿಳಾ ಸಚಿವೆಯೊಬ್ಬರ ಕುರಿತು ಕೆಟ್ಟಪದ ಬಳಕೆ ಮಾಡಿದ್ದರು. ಇದೇ ಚಾಳಿಯನ್ನು ಜಿಲ್ಲೆಯಲ್ಲಿಯೂ ಮುಂದುವರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸವಿತಾ ಸಮಾಜದ ಮುಖಂಡರಾದ ಚಂದ್ರಣ್ಣ, ಚಂದ್ರಶೇಖರ್ ಉಪಸ್ಥಿತರಿದ್ದರು.