ಜಿಲ್ಲೆ

ಸವಿತಾ ಮಹರ್ಷಿ ಜಯಂತಿ 16

ಕಲಬುರಗಿ: ರಥಸಪ್ತಮಿ ನಿಮಿತ್ತ ಶುಕ್ರವಾರ ನಗರದ ಡಾ.ಎಸ್.ಎಂ.ಪAಡಿತ ರಂಗಮAದಿರದಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಜಿಲ್ಲಾ ಸವಿತಾ ಸಮಾಜದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಆಡಕೆ, ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗಣೇಶ ಚಿನ್ನಾಕರ ತಿಳಿಸಿದರು.
ಸರ್ಕಾರದಿಂದ ಜಿಲ್ಲೆಯ ಎಲ್ಲೆಡೆ ಸರ್ಕಾರಿ ಕಚೇರಿ, ಶಾಲೆ ಕಾಲೇಜುಗಳಲ್ಲಿ ಜಯಂತಿ ಆಚರಿಸುತ್ತಿದ್ದು, ನಗರದಲ್ಲಿ ಜಿಲ್ಲಾಡಳಿತದಿಂದ ಬೆಳಗ್ಗೆ ೧೧ಕ್ಕೆ ಹಮ್ಮಿಕೊಂಡಿರುವ ಜಯಂತ್ಯುತ್ಸವದಲ್ಲಿ ಶ್ರೀ ಸವಿತಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ ಎಂದು ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸರ್ಕಾರಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ನಾಗಪ್ಪ ಟಿ. ಗೋಗಿ ಉಪನ್ಯಾಸ ನೀಡಲಿದ್ದಾರೆ ಎಂದರು.
ಮಾ.೫ರAದು ಅದ್ದೂರಿ ಕಾರ್ಯಕ್ರಮ: ಫೆ.೧೬ರಂದು ಸರ್ಕಾರದಿಂದ ಜಯಂತಿ ಆಚರಿಸುತ್ತಿದ್ದು, ಸಮಾಜದ ವತಿಯಿಂದ ಮಾ.೫ರಂದು ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ೫೦೦ ಮಹಿಳೆಯರಿಂದ ಕುಂಬ, ಕಲಶದೊಂದಿಗೆ ಸವಿತಾ ಮಹರ್ಷಿ ಮತ್ತು ಶ್ರೀ ಸಂತ ಸೇವಾ ಮಹಾರಾಜರ ಭಾವಚಿತ್ರದೊಂದಿಗೆ ಅದ್ದೂರಿ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಮಾಡಲಾಗುವುದು. ೨ಎನಿಂದ ಪ್ರವರ್ಗಕ್ಕೆ ಒಂದಕ್ಕೆ ಸೇರಿಸುವುದು ಸೇರಿ ಸಮಾಜದ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು. ವಿಶೇಷ ಉಪನ್ಯಾಸ ಇರಲಿದೆ ಎಂದು ತಿಳಿಸಿದರು.
ಜಯಂತ್ಯುತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಸೂರ್ಯಕಾಂತ ಬೆಣ್ಣೂರ, ಪ್ರಮುಖರಾದ ನಾಗೇಂದ್ರ ಪೆದ್ದರಪೇಠ, ಪ್ರಭಾಕರ ಪೆದ್ದಾರಪೇಠ, ರಾಜು ಕೊಳ್ಳಿ, ಶಿವಶರಣಪ್ಪ ಚಿಂಚೋಳಿ, ಶಾಂತು ಚೆನ್ನೂರ, ತುಳಜಮ್ಮ ಮಾನೆ, ಶಿವಲೀಲಾ ಜುಂಟಪಲ್ಲಿ, ಲಲಿತಾ ತಾಂಡೂರಕರ್ ಇತರರಿದ್ದರು.