ಜಿಲ್ಲೆ

ಸವಲತ್ತು ಸದ್ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸಿ

ಅರಸೀಕೆರೆ: ಸಂಘ ಸಂಸ್ಥೆಗಳಿಂದ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಅನಂತ ಸದ್ವಿದ್ಯಾ ಸಂಸ್ಥೆ ಹಾಗೂ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್. ಅನಂತಕುಮಾರ್ ಹೇಳಿದರು.


ಮಾರುತಿನಗರ ಬಡಾವಣೆಯ 31 ನೇ ವಾರ್ಡ್‌ನ ನಗರಸಭೆ ಸದಸ್ಯೆ ಸುಜಾತಾ ರಮೇಶ್ ಸ್ನೇಹ ಬಳಗದ ವತಿಯಿಂದ ಮಾರುತಿ ನಗರದ ಶ್ರೀ ಆಂಜನೇಯ ದೇಗುಲದ ಬಳಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತರಿಗೆ ಉಚಿತ ಲ್ಯಾಪ್‌ಟಾಪ್, ನೋಟ್‌ಬುಕ್ ಒಳಗೊಂಡಂತೆ ವಿವಿಧ ಕಲಿಕಾ ಪರಿಕರಗಳನ್ನು ವಿತರಿಸಿ ಮಾತನಾಡಿದರು. ಬಡಾವಣೆಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳನ್ನು ಗುರುತಿಸಿ ಸ್ವ ಪ್ರೇರಣೆಯಿಂದ ನೆರವು ಒದಗಿಸಲು ಮುಂದಾಗಿರುವುದು ಪ್ರಶಂಸನೀಯ ಎಂದರು.


ಆದರ್ಶ ಲ್ಯಾಬ್‌ನ ಜಗನ್ನಾಥ್ ರೈ, ನಗರಸಭೆ ಸದಸ್ಯೆ ಸುಜಾತಾ ರಮೇಶ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಲ್.ಮಂಜುನಾಥ್, ಶಫಿ, ಮುಖಂಡರಾದ ರಮೇಶ್, ಮಂಜುನಾಥ್, ವೇಣು, ಪ್ರಶಾಂತ್ ರಮೇಶ್, ಉಮೇಶ್ ನಾಯ್ಕ, ಸಂತೋಷ್, ನರೇಂದ್ರ, ರಿಜ್ವಾನ್ ಸೇರಿದಂತೆ ವಾರ್ಡ್‌ನ ಸಾರ್ವಜನಿಕರು ಉಪಸ್ಥಿತರಿದ್ದರು.