ಸವದತ್ತಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬಣಜಿಗ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸಂಸದ ಜಗದೀಶ ಶೆಟ್ಟರ್​ ಉದ್ಘಾಟಿಸಿದರು. ಶಿಲ್ಪಾ ಶೆಟ್ಟರ್​, ಮಲ್ಲಿಕಾರ್ಜುನ ಸ್ವಾಮೀಜಿ, ಡಾ.ಸಿ.ಬಿ.ನಾವದಗಿ, ಅಶೋಕ ಹಾದಿಮನಿ ಇತರರಿದ್ದರು. 
ಜಿಲ್ಲೆ

ಸವದತ್ತಿಗೆ ರೈಲ್ವೆ ಮಾರ್ಗಕ್ಕೆ ಪ್ರಯತ್ನ

ಸವದತ್ತಿ: ಸಮಾಜದಲ್ಲಿ ಬಡ ವಿದ್ಯಾರ್ಥಿಗಳಿದ್ದು, ಅಂಥವರನ್ನು ಗುರುತಿಸಿ ನೆರವು ನೀಡಿದರೆ ಸಾಧನೆಗೆ ಸ್ಫೂರ್ತಿಯಾಗಲಿದೆ ಎಂದು ಸಂಸದ ಜಗದೀಶ ಶೆಟ್ಟರ್​ ಹೇಳಿದರು.

ಇಲ್ಲಿನ ಶ್ರೀ ಕಲ್ಮಠ ಆವರಣದಲ್ಲಿ ರಾಜ್ಯ ಬಣಜಿಗ ಸಮುದಾಯದ ೇಮಾಭಿವೃದ್ಧಿ ಸಂದಿಂದ ಭಾನುವಾರ ಹಮ್ಮಿಕೊಂಡಿದ್ದ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಲಿಂಗಾಯತ ಸಮುದಾಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅನೇಕರು ದೊಡ್ಡ ದೊಡ್ಡ ಹುದ್ದೆ ಪಡೆದಿದ್ದು, ಅಂಥವರನ್ನು ಗುರುತಿಸುವ ಕೆಲಸ ಆಗಬೇಕು.ೇತ್ರದ ಜ್ವಲಂತ ಸಮಸ್ಯೆ ಅರಿತು ಪರಿಹಾರ ಕಲ್ಪಿಸುವೆ ಎಂದು ಭರವಸೆ ನೀಡಿದರು.

ಹೊಸ ಯೋಜನೆಗಳ ಮೂಲಕ ೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು. ಯಲ್ಲಮ್ಮ ಭಕ್ತರಿಗಾಗಿ ಮೂಲಸೌಕರ್ಯ ಕಲ್ಪಿಸಲಾಗುವುದು. ೇತ್ರದ ಆರ್ಥಿಕ ಬೆಳವಣಿಗೆಗಾಗಿ ರೈಲು ಮಾರ್ಗದ ಅವಶ್ಯಕತೆಯಿದ್ದು, ಈಗಾಗಲೇ ಸಚಿವರೊಂದಿಗೆ ಚರ್ಚಿಸಲಾಗಿದೆ. ೇತ್ರದ ಪುರಾತನ ದೇವಸ್ಥಾನಗಳ ರಣೆ ಮತ್ತು ಅಭಿವೃದ್ಧಿಗೆ ಬೇಕಾದ ಪೂರಕ ವ್ಯವಸ್ಥೆಗಾಗಿ ನಿಗಾವಹಿಸಲಾಗುವುದು. ಮಲಪ್ರಭೆಗೆ ಕಳಸಾ ಬಂಡೂರಿ ಮಹದಾಯಿ ನದಿ ಜೋಡಣೆ ಕುರಿತು ಚರ್ಚೆ ನಡೆದಿದ್ದು, ತ್ವರಿತ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದರು.

ಅಶೋಕ ಹಾದಿಮನಿ ಮತ್ತು ಕಸ್ತೂರಿ ಹೂಲಿ ಪ್ರಾಸ್ತಾವಿಕ ಮಾತನಾಡಿದರು. ಮೂಲಿಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿಲ್ಪಾ ಶೆಟ್ಟರ್​, ಡಾ.ಸಿ.ಬಿ.ನಾವದಗಿ, ಸಂಗಮೇಶ ಬಿಸರಳ್ಳಿ, ಶೋಭಾ ಬಿಸರಳ್ಳಿ, ಶೈಲಜಾ ಅಂಗಡಿ, ಪ್ರವಿಣ ಪಟ್ಟಣಶೆಟ್ಟಿ, ಮನೋಹರ ಶೆಟ್ಟರ್​, ಶಿವಾನಂದ ಪಟ್ಟಣಶೆಟ್ಟಿ, ಶಿವಾನಂದ ಜಕಾತಿ, ಉಮೇಶ ಬಾಳಿ, ಮಹಾಂತೇಶ ಅಮ್ಮಿನಬಾವಿ ಇತರರು ಇದ್ದರು.