ಸವದತ್ತಿ ಪಟ್ಟಣದಲ್ಲಿ ಶಾಸಕರ ಜನಸಂಪರ್ಕ ಕಚೇರಿ ಉದ್ಘಾಟಿಸಿದ ಶಾಸಕ ವಿಶ್ವಾಸ ವೈದ್ಯ ಅವರು ಅಂಗವಿಕರಿಗೆ ತ್ರಿಚಕ್ರ ವಾಹನ ಹಸ್ತಾಂತರಿಸಿದರು.ಯಶವಂತ ಕುಮಾರ, ರಾಮನಗೌಡ ಹಟ್ಟಿ, ಕರುಣೇಶಗೌಡ ಜೆ., ಡಾ. ಎಚ್.ಎಂ.ಮಲ್ಲನಗೌಡ್ರ, ಡಾ.ಶ್ರೀಪಾದ ಸಬನಿಸ, ಅಶ್ವತ್ಥ ವೈದ್ಯ ಇತರರು ಇದ್ದರು. 
ಜಿಲ್ಲೆ

ಸವದತ್ತಿ ತಾಲೂಕು ಆಸ್ಪತ್ರೆ ಶೀಘ್ರ ಮೇಲ್ದರ್ಜೆಗೆ

ಸವದತ್ತಿ: ಪಟ್ಟಣದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಯೋಜನೆ ಇದ್ದು, ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ 300 ಬೆಡ್‌ಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದಲ್ಲಿ ಎಸ್‌ಎಲ್‌ಎಒ ಕ್ರಾಸ್‌ನ ನೀರಾವರಿ ಕಾಲನಿಯಲ್ಲಿ ಶಾಸಕರ ಜನಸಂಪರ್ಕ ಕಚೇರಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಅನೇಕ ಯೋಜನೆ ಜನರಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ಯಲ್ಲಮ್ಮ ದೇವಸ್ಥಾನ ಅಭಿವದ್ಧಿಗೆ 160 ಕೋಟಿ ರೂ.ಗೂ ಅಧಿಕ ಅನುದಾನ ಇರಿಸಿ, ಅಭಿವದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಸಚಿವರು ಮತ್ತು ಅಧಿಕಾರಿಗಳ ಜತೆ ಚರ್ಚಿಸಿ ಭಕ್ತರಿಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯರೂಪಿಸಲಾಗಿದೆ ಎಂದರು.

ಕುಡಿಯುವ ನೀರು ಯೋಜನೆಗೆ ವೇಗ ನೀಡಲಾಗಿದೆ. ಸತ್ತಿಗೇರಿ ಏತ ನೀರಾವರಿಯಿಂದ ರೈತರಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಮನವಳ್ಳಿ ಮತ್ತು ಯರಗಟ್ಟಿ ಪಟ್ಟಣದಲ್ಲಿ 24/7 ಕುಡಿಯುವ ನೀರಿನ ವ್ಯವಸ್ಥೆಗೆ ಶೀಘ್ರ ಕಾರ್ಯರೂಪಕ್ಕೆ ತರಲಾಗುವುದು. ನಗರದ ಪಕ್ಕದಲ್ಲಿರುವ ಸ್ಪಿನ್ನಿಂಗ್ ಮಿಲ್ ಬಂದ್ ಆಗಿದ್ದು, ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಉತ್ತಮ ಕಾರ್ಖಾನೆ ನಿರ್ಮಿಸಿ 3 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ನೀಡಲಾದ ವಾಹನಗಳನ್ನು ಶಾಸಕ ವಿಶ್ವಾಸ ವೈದ್ಯ ಅಂಗವಿಕಲ ಲಾನುಭವಿಗಳಿಗೆ ಹಸ್ತಾಂತರಿಸಿದರು.

ತಾಪಂ ಇಒ ಯಶವಂತ ಕುಮಾರ, ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಪಿಐ ಕರುಣೇಶಗೌಡ ಜೆ., ವೈದ್ಯಾಧಿಕಾರಿ
ಡಾ. ಎಚ್.ಎಂ.ಮಲ್ಲನಗೌಡ್ರ, ಆರೋಗ್ಯಾಧಿಕಾರಿ ಡಾ.ಶ್ರೀಪಾದ ಸಬನಿಸ, ಅಶ್ವತ್ಥ ವೈದ್ಯ, ರಾಜಶೇಖರ ಕಾರದಗಿ, ಪ್ರಭು ಪ್ರಭುನವರ, ದೀಪಕ ಜಾನ್ವೇಕರ, ಶಿವಾನಂದ ಪಟ್ಟಣಶೆಟ್ಟಿ, ಮೈತ್ರಾದೇವಿ ವಸ್ತ್ರದ, ಶಂಕರ ಅಂತರಗಟ್ಟಿ, ಡಿ.ಡಿ.ಟೋಪೊಜಿ, ಮಲ್ಲು ಜಕಾತಿ, ಮಾಜಿ ಶಾಸಕ ಆರ್.ವಿ.ಪಾಟೀಲ, ಚಂದ್ರು ಶಾಮರಾಯನವರ ಇತರರು ಇದ್ದರು.