ಜಿಲ್ಲೆ

ಸ್ವಾತಂತ್ರ್ಯ ಹೋರಾಟಕ್ಕೂ ಕಾಂಗ್ರೆಸ್ ಗೂ ಸಂಬಂಧ ಇಲ್ಲ: ಸೂಲಿಬೆಲೆ


ಹಾಸನ : ಸಾವರ್ಕರ್ ಬರುವ ಮುಂಚೆ ಈ ದೇಶದ ಸ್ವಾತಂತ್ರ್ಯ ಹೋರಾಟ ಕಾಂಗ್ರೆಸ್ ಪಕ್ಷದ ಕೈಯಲಿತ್ತು. ಈಗಿರುವ ಕಾಂಗ್ರೆಸ್ ಪಕ್ಷ ಒರಿಜಿನಲ್ ಕಾಂಗ್ರೆಸ್ ಪಕ್ಷ ಅಲ್ಲ. ಈಗ ಇರುವುದು ಇಂದಿರಾ ಕಾಂಗ್ರೆಸ್ ಆಗಿದ್ದು, ಸ್ವಾತಂತ್ರ್ಯ ಹೋರಾಟಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧವಿಲ್ಲ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗಿರುವ ಪಾಂಚಜನ್ಯ ಗಣಪತಿ ಸನ್ನಿಧಾನದಲ್ಲಿ ಶುಕ್ರವಾರ ಸಂಜೆ ವೀರ ಸಾವರ್ಕರ್ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಕಾಂಗ್ರೆಸ್ ಬೇಡಿಕೆ ಸ್ವಾತಂತ್ರ ಅಲ್ಲ. ಇಂಡಿಯಾ ಸಿವಿಲ್ ಸರ್ವೀಸ್ ಇಂಗ್ಲೆಂಡ ನಲ್ಲಿ ನಡೆಯುವುದನ್ನು ಭಾರತದಲ್ಲಿ ನಡೆಸಲಿ ಅಂತಾ ಒಂದೇ ಬೇಡಿಕೆಯಾಗಿತ್ತು. 12 ನೇ ವಯಸ್ಸಿನಲ್ಲಿ ಸಾವರ್ಕರ್ ರಾಷ್ಟ್ರ ಭಕ್ತ ಸಮೂಹ ಎಂದು ಟೀಮ್ ಕಟ್ಟಿದವರು. ಸ್ವಾತಂತ್ರ ಹೋರಾಟದಲ್ಲಿ ನಾವು ಎನೆನೂ ನೋಡಿದ್ದೇವೆ ಅದಕ್ಕೆಲ್ಲ ಮೂಲ ಸಾವರ್ಕರ್ ಆಗಿದ್ದಾರೆ.
ಸಾವರ್ಕರ್ ಈ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ದೇಶ ಭಕ್ತಿಯ ಅಪಾದನೆ ಹೊತ್ತುಕೊಂಡು ಕಾಲೇಜು ಶಿಕ್ಷಣದಿಂದ ಹೊರನೂಕಲ್ಪಟ್ಟರು ಎಂದು ಹೇಳಿದರು.

ಇಂಗ್ಲೆಂಡ್ ಗೆ ಹೋಗಿದ್ದ ಸಾವರ್ಕರ್ ಲಂಡನ್ ಗ್ರಂಥಾಲಯದಲ್ಲಿ ಇಟಲಿ ಕಾಂತ್ರಕಾರಿ ಹೋರಾಟಗಾರ ಮ್ಯಾಜನಿ ಪುಸ್ತಕ ಅಭ್ಯಾಸ ಮಾಡಿದರು. ಮುಂದೆ ಸಾವರ್ಕರ್ ಅ ಪುಸ್ತಕಗಳನ್ನು ಮರಾಠಿ ಭಾಷೆಗೆ ತಂದರು. ಸಾವರ್ಕರ್ ಗೆ ಬ್ರಿಟಿಷ್ ಸರ್ಕಾರ ಒಟ್ಟು 50 ವರ್ಷ ಜೀವವಾಧಿ ಶಿಕ್ಷೆ ನೀಡಿತ್ತು. ಸಾವರ್ಕರ್ ಗೆ ಜೈಲು ಶಿಕ್ಷೆ ಕೊಡಲು ಕಾರಣ ಆತ ಇಂಗ್ಲೆಂಡ್ ಗೆ ಹೋಗುವ ಮುಂಚೆ ಬ್ರಿಟಿಷ್ ಸರ್ಕಾರದ ವಿರುದ್ಧ ಮಾಡಿದ ಭಾಷಣ ಎಂದು ತಿಳಿಸಿದರು.

1857 ರ ಸ್ವಾತಂತ್ರ ಹೋರಾಟವನ್ನು ಈಗಲೂ ಸಿಪಾಯಿ ದಂಗೆ ಎಂದು ಕರೆಯುತ್ತಾರೆ ಅದನ್ನು ಸಾವರ್ಕರ್ ಹೇಳಿದ್ದು. ಅದು ಭಾರತದ ಸ್ವಾತಂತ್ರ್ಯ ಹೋರಾಟ. ಸಾವರ್ಕರ್ ಗೆ ಹೆದರಿದಷ್ಟು ಬ್ರಿಟಿಷ್ ರು ಕಾಂಗ್ರೆಸ್ ನಾಯಕರಿಗೆ ಹೆದರಲಿಲ್ಲ. ಈಗ ಸಾವರ್ಕರ್ ಬಗ್ಗೆ ಇಲ್ಲಸಲ್ಲದ ಮಾತನಾಡುವರು ಅಯೋಗ್ಯರು. ಸಾವರ್ಕರ್ ಬರೆದ ಒಂದು ಲೈನ್ ಬರೆಯಲು ಸಾಧ್ಯವಿಲ್ಲ. ಅಂಡಮಾನ್ ಜೈಲಿನ ಕೊಣೆ ನೋಡಿದರೆ ಅಷ್ಟು ಜೈಲಿನಲ್ಲಿ ಇದ್ದರೂ ಸ್ವಾತಂತ್ರದ ಕಿಚ್ಚು ಆರಲಿಲ್ಲ. ಕ್ಷಮಾಪಣೆ ಪತ್ರ ಸಾವರ್ಕರ್ ಬರೆದಿಲ್ಲ. ನಾನು ಬದಲಾಗಿದ್ದೆನೆ ಎಂದಷ್ಟೇ ಬ್ರಿಟಿಷ್ ರಿಗೆ ಪತ್ರ ಬರೆದಿದ್ದರು ಎಂದರು.

ಸಾವರ್ಕರ್ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡಿ ಎಂದು ಬರೆದಿದ್ದರು. ಅವರ ಬಿಡುಗಡೆಗೆ ನಾನು ತೊಂದರೆಯಾಗಿದ್ದಾರೆ ನನ್ನ ಹೊರತು ಪಡಿಸಿ ಉಳಿದ ಖೈದಿಗಳನ್ನು ಬಿಡುಗಡೆ ಮಾಡಿ ಎಂದು ಪತ್ರ ಬರೆದಿದ್ದರು. ಇದು ಕಾಂಗ್ರೆಸ್ ಪಕ್ಷದ ನಾಯಕರಿಗೆ ಗೊತ್ತಿಲ್ಲ. ಸಾವರ್ಕರ್ ಜೈಲಿನಲ್ಲಿ ಸುಮ್ಮನೆ ಕುಳಿತುಕೊಳ್ಳಲಿಲ್ಲ ಅಲ್ಲು ಮುಸ್ಲಿಂ ಮತಾಂತರದ ಬಗ್ಗೆ ವಿರೋಧ ಮಾಡಿದರು. ಸಾವರ್ಕರ್ ನಡೆಸಿದ ಪ್ರತಿಭಟನೆ ಅಂಗವಾಗಿ ಜೈಲಿನಲ್ಲಿ ಇದ್ದ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡಲಾಯಿತು. ಸಾವರ್ಕರ್ 27 ವರ್ಷ ಜೈಲಿನಲ್ಲಿ ಇದ್ದರೂ ಕಾಂಗ್ರೆಸ್ ಪಕ್ಷದ ಆಯೋಗ್ಯರು ಏನು ಮಾಡಿದ್ದಾರೆ ಅಂತ ಕೇಳುತ್ತಾರೆ. ಗಾಂಧಿಜಿಯಷ್ಟು ಮತ್ತು ಡಾ ಬಿ.ಆರ್.ಅಂಬೇಡ್ಕರ್ ಅಷ್ಟು ಪ್ರಚಾರ ಸಾವರ್ಕರ್ ಗೆ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಟಲ್ ಬಿಹಾರಿ ವಾಜಪೇಯಿ ಅವರು ಸಾವರ್ಕರ್ ಪೊಟೋವನ್ನು ಸಂಸತ್ತಿನ ಆವರಣದಲ್ಲಿ ಹಾಕಲು ಮುಂದಾದಗ ಇಟಲಿ ಮೂಲದ ಸೋನಿಯಗಾಂಧಿ ಅಡ್ಡಿಪಡಿಸಿದರು ಎಂದು ತಿಳಿಸಿದರು.

  ವಕೀಲರ ಸಂಘದ ಅಧ್ಯಕ್ಷ ಮಂಜುನಾಥ್ ಮೂರ್ತಿ, ಪಾಂಚಜನ್ಯ ಹಿಂದೂ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಮೊಗಣ್ಣಗೌಡ, ಸಮಾಜ ಸೇವಕ ಜಿ.ಓ. ಮಹಾಂತಪ್ಪ ಇತರರು ಉಪಸ್ಥಿತರಿದ್ದರು.