ಚಿಕ್ಕಮಗಳೂರು ಹೊರವಲಯದ ಮೂಗ್ತಿಹಳ್ಳಿಯಲ್ಲಿರುವ ಸಾವಯುವ ಕೃಷಿಕ ಚಂದ್ರಶೇಖರ್ ನಾರಣಾಪುರ ಅವರ ಕೃಷಿ ನಿವಾಸದಲ್ಲಿ ಮಠದ ಸ್ವಾಮೀಜಿಗಳು ಸೇರಿದಂತೆ,ರಾಜ್ಯದ ಹಲವು ಜಿಲ್ಲೆಗಳ ಸಮಾನ ಮನಸ್ಕರು ಕೃಷಿ ನಿವಾಸಕ್ಕೆ ಆಗಮಿಸಿ ಸರ್ವೋದಯ ಸಮುದಾಯ ಕರ್ನಾಟಕ ಕುರಿತು ಎರಡು ದಿನಗಳ ಕಾಲ ಅರಿವು, ಆರೋಗ್ಯ, ಆನಂದ, ನೀತಿ ಪ್ರೀತಿ, ಏಕತೆ, ಶಾಂತಿ, ಸೇವೆ ಸಾರ್ಥಕತೆಗಳ ಕುರಿತು ಚಿಂತನ ಮಂಥನ ಕಾರ್ಯಕ್ರಮ ನಡೆಯಿತು. 
ಜಿಲ್ಲೆ

ಸರ್ವೋದಯ ಸಮುದಾಯದ ಬಲವರ್ಧನೆಗೆ ನೆಲಮೂಲದ ಆಲೋಚನೆಗಳು ಪ್ರವಹಿಸಲಿ

ಚಿಕ್ಕಮಗಳೂರು: ಹೊಸ ತಲೆಮಾರಿನ ಯುವ ಸಮುದಾಯದ ಉದಯವಾಗಬೇಕಾದರೆ ನಾವುಗಳು ನಮ್ಮ ಮಕ್ಕಳನ್ನು ಮರ ಗಿಡಗಳೊಂದಿಗೆ ಬೆಳೆಸಬೇಕು. ಮರ ಗಿಡಗಳು ಯಾರನ್ನು ನಿರಾಶೆಗೊಳಿಸುವುದಿಲ್ಲ. ಹೂವೊಂದು ಯಾವುದೇ ಫಲಾಪೇಕ್ಷೆ ಇಲ್ಲದೆ ಅರಳಿ ತನ್ನ ಘಮವನ್ನು ಪಸರಿಸಿ, ನಿಸ್ವಾರ್ಥದಿಂದ ಫಲ ಪುಷ್ಪ ನೀಡಿ ಜೀವ ಸಂಕುಲಗಳ ಹಿತಾಸಕ್ತಿಯನ್ನು ಕಾಪಾಡುತ್ತದೆಯೋ ಹಾಗೆ ನೆಲಮೂಲದ ಆಲೋಚನೆಗಳು ಹೊಸ ಹೊಸ ಜ್ಞಾನದ ಪಸೆಯೊಂದಿಗೆ ಹೊರಬಂದು ಇಡೀ ಮಾನವ ಕಲ್ಯಾಣದ ಒಟ್ಟು ಹಿತಾಸಕ್ತಿಯನ್ನು ಒಂದು ನಾವಿನ್ಯತೆಯೊಂದಿಗೆ ಪ್ರೇರೇಪಿಸಬೇಕಾಗಿದೆ ಎಂದು ಚನ್ನಗಿರಿಮಾಜಿ ಶಾಸಕ ಮಹಿಮಾ ಪಟೇಲ್ ಅಭಿಪ್ರಾಯಪಟ್ಟರು.

ನಗರ ಸಮೀಪದ ಮೂಗ್ತಿಹಳ್ಳಿಯಲ್ಲಿರುವ ಸಾವಯುವ ಕೃಷಿಕ ಚಂದ್ರಶೇಖರ್ ನಾರಣಾಪುರ ಅವರ ಕೃಷಿ ನಿವಾಸದಲ್ಲಿ ಮಠದ ಸ್ವಾಮೀಜಿಗಳು ಸೇರಿದಂತೆ,ರಾಜ್ಯದ ಹಲವು ಜಿಲ್ಲೆಗಳ ಸಮಾನ ಮನಸ್ಕರು ಕೃಷಿ ನಿವಾಸಕ್ಕೆ ಆಗಮಿಸಿ ಸರ್ವೋದಯ ಸಮುದಾಯ ಕರ್ನಾಟಕ ಕುರಿತು ಎರಡು ದಿನಗಳ ಕಾಲ ಅರಿವು, ಆರೋಗ್ಯ, ಆನಂದ, ನೀತಿ ಪ್ರೀತಿ, ಏಕತೆ, ಶಾಂತಿ, ಸೇವೆ ಸಾರ್ಥಕತೆಗಳ ಕುರಿತು ಚಿಂತನ ಮಂಥನದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಧಿಪತ್ಯ ಮತ್ತು ಲಾಭಕೋರತನ ರಾಜಕಾರಣವನ್ನು ಹಿಮ್ಮೆಟ್ಟಿ ಸೇವಾ ರಾಜಕಾರಣದತ್ತ ಅವಶ್ಯಕವಾಗಿ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಈಗ ಸಮಾಜಕ್ಕೆ ಹಿಂದಿಗಿAತಲೂ ಹೆಚ್ಚು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಜನ ಸಂವಾದದ ಮೂಲಕ ಹೊಸ ತಲೆಮಾರನ್ನು ಎಚ್ಚರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಕ್ಷೇತ್ರದ ಸುಧಾರಣೆಯು ಒಳಗೂಡಂತೆ ಹಲವು ಪರಿವರ್ತನೆಗಳು ಸೇರಿದಂತೆ ಪ್ರಮುಖವಾಗಿ ಐದು ಅಂಶಗಳೊAದಿಗೆ ರಾಜಕೀಯ ಕ್ಷೇತ್ರವನ್ನು ಶುದ್ಧೀಕರಣಗೊಳಿಸುವುದು ಸರ್ವೋದಯ ಕರ್ನಾಟಕದ ಅತಿ ಮುಖ್ಯ ಜನ ಸಂವಾದವಾಗಿದೆ ಎಂಬ ಅಂಶಗಳು ಎರಡು ದಿನದ ಕಾರ್ಯಾಗಾರದಲ್ಲಿ ಹೊರಹೊಮ್ಮಿದವು.

ಸರ್ಕಾರಕ್ಕೆ, ಸಮಾಜಕ್ಕೆ ಪ್ರಶ್ನೆ ಹಾಕುವ ಮೂಲಕ ಸರ್ವೋದಯ ಕರ್ನಾಟಕ ಕಟ್ಟಬೇಕಾಗಿದೆ. ಇಂತಹ ಸರ್ವೋದಯ ಕರ್ನಾಟಕದ ಒಳಗೆ ಬರುವವರು ಮೊದಲು ತಮ್ಮನ್ನು ತಾವು ಸುಧಾರಿಸಿಕೊಳ್ಳಬೇಕು. ಸರ್ವೋದಯದ ಹೆಸರಿನಲ್ಲಿ ಹೆಜ್ಜೆ ಹಾಕುವವರು ಶ್ರೇಷ್ಠತೆಯ ವ್ಯಸನಿಗಳಾಗದೆ, ನಾವು ನಿಂತ ಜಾಗವನ್ನು ಮೊದಲು ನಾವೇ ಗೆಲ್ಲುವಂತಾಗಬೇಕು. ಸಮೃದ್ಧ ಸಮಾಜದ ನಿರ್ಮಾಣವಾಗಬೇಕಾದರೆ ಮೊದಲು ನಮ್ಮನ್ನು ನಾವು ಸರಿಯಾಗಿ ಕಂಡುಕೊಳ್ಳಬೇಕು. ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದನ್ನು ಕಲಿಯದಿದ್ದರೆ ಸಮಾಜಲ್ಲಿ ವಿಶ್ವಾಸವನ್ನು ವೃದ್ಧಿಸಲು ಸಾಧ್ಯವಿಲ್ಲ. ಸರ್ವೋದಯದ ನಾಡಿಗಾಗಿ ಜನ ಸಮುದಾಯದ ನಾಡಿಮಿಡಿತವನ್ನು ಹಿಡಿದು ಸಾಗಿದಾಗ ಮಾತ್ರ ಜನಕಲ್ಯಾಣದ ಹೊಸ ರಾಜ್ಯ ಸ್ಥಾಪನೆ ಆಗಲು ಸಾಧ್ಯ ಎಂಬ ಚಿಂತನ ಮಂಥನದೊAದಿಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹಂತ ಹಂತವಾಗಿ ಜನ ಸಂವಾದ ಮಾಡಲು ಈ ಕಾರ್ಯಗಾರ ತೀರ್ಮಾನಿಸಿತು.

ಸಾಣೇಹಳ್ಳಿ ಮತ್ತು ಪಾಂಡುಮಟ್ಟಿ ಮಠದ ಉಭಯ ಶ್ರೀಗಳು ಒಳಗೊಂಡAತೆ, ವೈಚಾರಿಕ ಚಿಂತಕ ಹಾಗೂ ಬರಹಗಾರ ಡಾ. ಅಬ್ದುಲ್ ರೆಹಮಾನ್ ಪಾಷ, ವಿಶ್ವ ಮಾನವ ಮಂಟಪದ ಸಂಸ್ಥಾಪಕ ಅವರಗೆರೆ ರುದ್ರಮನಿ, ಸಾವಯುವ ಕೃಷಿಕ ಚಂದ್ರಶೇಖರ್ ನಾರಣಾಪುರ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಮಾಜಮುಖಿಯಾಗಿ ದುಡಿಯುತ್ತಿರುವ ೩೦ಕ್ಕೂ ಹೆಚ್ಚು ಜನ ಈ ಚಿಂತನ ಮಂಥನ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.