ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿ ಸವಾಯಿ ಗಂಧರ್ವ ಹಾಲ್‌ನಲ್ಲಿ ಮಾ. 26, 26ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಧಾರವಾಡ ತಾಲೂಕು ಮುಗದ ಗ್ರಾಮದ ನಿವೃತ್ತ ಪ್ರಾಧ್ಯಾಪಕ ಪ್ರೊ. ಧರಣೇಂದ್ರ ಕುರಕುರಿ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಸಾಪ ಕಾರ್ಯಕಾರಿ ಸಮಿತಿಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕಸಾಪ ಹುಬ್ಬಳ್ಳಿ ತಾಲೂಕು ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ ಅವರು ಪ್ರೊ. ಧರಣೇಂದ್ರ ಕುರಕುರಿ ಹೆಸರು ಸೂಚಿಸಿದ್ದರು. ಅದಕ್ಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಶಿ ಸಾಲಿ ಅನುಮೋದನೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಗೌರವ ಕಾರ್ಯದರ್ಶಿ ಪ್ರೊ. ಕೆ. ಎಸ್. ಕೌಜಲಗಿ, ಡಾ. ಜಿನದತ್ತ ಹಡಗಲಿ, ಬಿ.ಜಿ. ಬಾರ್ಕಿ, ಎಸ್.ಎಂ. ದಾನಪ್ಪನವರ, ಮಹಾಂತೇಶ ನರೇಗಲ್, ಶಾಂತವೀರ ಬೆಟಗೇರಿ, ಶ್ರೀಧರ ಹೆಗಡೆ ಭದ್ರನ, ಪ್ರಭು ಕುಂದರಗಿ, ಸಿ.ಎಂ ಚನ್ನಬಸಪ್ಪ, ಸಿದ್ದರಾಮ ಹಿಪ್ಪರಗಿ, ಡಾ. ಶರಣಮ್ಮ ಗೊರೇಬಾಳ, ಈಶ್ವರ ಜವಳಿ, ಬಾಬಾಜಾನ ಮುಲ್ಲಾ, ಡಾ. ಎನ್.ಎಂ. ಮಕಾನದಾರ, ರಂಜಾನ್ ಕಿಲ್ಲೇದಾರ, ರವಿರಾಜ ವೇರ್ಣೇಕರ, ಇತರರು ಇದ್ದರು.
ಪ್ರೊ. ಧರಣೇಂದ್ರ ಕುರಕುರಿ ಅವರು 9 ಗ್ರಂಥಗಳನ್ನು ಪ್ರಕಟಿಸಿ, 7 ಗ್ರಂಥಗಳನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದು, ಕನ್ನಡದಿಂದ ಹಿಂದಿಗೆ 17 ಗ್ರಂಥಗಳನ್ನು ಅನುವಾದ ಮಾಡಿದ್ದಾರೆ. ಹಿರಿಯ ಸಾಹಿತಿಗಳಾದ ಕುರಕುರಿ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ 17 ಪ್ರಶಸ್ತಿಗಳನ್ನು ಪಡೆದಿದ್ದಾರೆ.