ಜಿಲ್ಲೆ

ಸರ್ವಾಧಿಕಾರಿ ಪ್ರಿಯಾಂಕ್ ರಾಜ್ಯದ ಸ್ಪೆಷಲ್ ಬೇಬಿ

ಕಲಬುರಗಿ: ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕೆಡಿಪಿ ಸಭೆ ನಡೆಸಲ್ಲ, ಕೋರ್ಟ್ಗೆ ಹೋಗಿ ಎನ್ನುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ೪೦ ಸಭೆ ಮಾಡಿದ್ದೀನಿ ಎನ್ನುವ ಅವರಿಗೆ ಕನಿಷ್ಠ ಅವರ ಪಕ್ಷ ಶಾಸಕರು ಜತೆಗಿರಲಿಲ್ಲ ಎಂಬ ಅರಿವಿಲ್ಲ. ಎಲ್ಲದರಲ್ಲೂ ಹಸ್ತಕ್ಷೇಪ ಮಾಡುವ ರಾಜ್ಯದ ಏಕೈಕ ಸ್ಪೆಷಲ್ ಬೇಬಿ ಪ್ರಿಯಾಂಕ್ ಎಂದು ಸಂಸದ ಡಾ.ಉಮೇಶ ಜಾಧವ್ ವ್ಯಂಗ್ಯವಾಡಿದರು.

ಆಶ್ರಯ ಕಾಲನಿಯಲ್ಲಿ ನಲ್ವತ್ತು ಕುಟುಂಬಗಳನ್ನು ಬೀದಿಗೆ ಬಿಡಲಾಗಿದೆ. ಕನಿಷ್ಠ ಸೌಜನ್ಯಕ್ಕೂ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಆಗಿಲ್ಲ. ಆ ಸ್ಥಳದಲ್ಲಿ ಬಂಜಾರ ಸಮುದಾಯದವರು ಮಾತ್ರ ಇದ್ದಾರೆ ಎನ್ನುತ್ತಿದ್ದಾರೆ. ಅಲ್ಲಿ ಬಂಜಾರ, ಕೊಂಚ, ಕೊರಮ, ಹೆಳವ ಸೇರಿ ವಿವಿಧ ದಲಿತ ಸಮುದಾಯದವರು ಇದ್ದಾರೆ. ಅದರ ಅರಿವು ಅವರಿಗಿಲ್ಲ. ಏಕೆಂದರೆ ಅವರು ಬೆಂಗಳೂರಿನಿಂದ ಹೊರಗೆ ಬಂದಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.

ಪ್ರಧಾನಿ ನರೇಂದ್ರ ಮೋದಿ ವಿದೇಶಕ್ಕೆ ಹೋಗುತ್ತಾರೆ ಎಂದು ಅವರ ಮಟ್ಟಕ್ಕೆ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರಿಗೆ ಟೆಕ್ಸ್ö್ಟಟೈಲ್ ಪಾರ್ಕ್ಗೆ ಇರುವ ತೊಡಕುಗಳನ್ನು ದೂರ ಮಾಡಿ, ಉದ್ಘಾಟಿಸಲು ಆಗುತ್ತಿಲ್ಲ. ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜು, ಸಿಬಿಎಸ್‌ಇ ಶಾಲೆ ಕಟ್ಟುವ ಇವರಿಗೆ ಗುರುಮಠಕಲ್‌ದಲ್ಲಿ ಒಂದು ಸಿಬಿಎಸ್‌ಇ ಶಾಲೆ ಕಟ್ಟಲು ಆಗಲಿಲ್ಲ. ಬೆಂಗಳೂರಿನಲ್ಲಿ ಇರುವವರಿಗೆ ಇದೆಲ್ಲ ಎಲ್ಲಿ ತಿಳಿಯಬೇಕು ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಕೆಡಿಪಿ ದಿಶಾ ಸಭೆ ೨೦ ತಿಂಗಳಿಂದ ನಡೆದಿಲ್ಲ. ಈಗ ೨೭ರಂದು ಮತ್ತೆ ಮುಂದೆ ಓಡಿಸುತ್ತೀದ್ದೀರಿ. ಚೇಲಾಗಳಿಗೆ ಖುಷಿ ಪಡಿಸಲು ಚಿಂಚೋಳಿಯಲ್ಲಿ ಜನಸ್ಪಂದನ ಮಾಡಿದ್ದಾರೆ. ನರೇಗಾ ಹಣ ಬಿಡುಗಡೆ ಬಗ್ಗೆ ಮಾತನಾಡುವ ನೈತಿಕತೆಯೇ ಪ್ರಿಯಾಂಕ್ ಹೊಂದಿಲ್ಲ. ರಾಷ್ಟಿಯ ಪಕ್ಷದ ಅಧ್ಯಕ್ಷರ ಮಗನಾಗಿ, ಸಚಿವನಾಗಿದ್ದು ಒಂದು ವ್ಯವಸ್ಥೆಯ ಅರಿವು ಇಲ್ಲ. ನರೇಗಾ ಅನುದಾನ ಬೇಡಿಕೆಗೆ ತಕ್ಕಂತೆ ಕೊಡುತ್ತಾರೆ. ನೀವು ಬೇಡದೇ ಬರೀ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರೆ ಆಗಲ್ಲ. ಅದಕ್ಕೆ ಒಂದು ನಿಯಮ ಇರುತ್ತದೆ ಅದನ್ನು ಮಾಡಿ ಎಂದು ಸಲಹೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇ ವಾಡಗಿ, ವಿಠಲ್ ಜಾಧವ್, ಸೇವಂತಿಬಾಯಿ ಚವ್ಹಾಣ್ ಇತರರಿದ್ದರು.