ಜಿಲ್ಲೆ

ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆ ಪೂರಕ

ಮುನವಳ್ಳಿ: ಕ್ರೀಡೆ ಶಿಣದ ಒಂದು ಭಾಗವಾಗಿದ್ದು, ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದೆ ಎಂದು ಶಿಂದೋಗಿ ಗ್ರಾಪಂ ಅಧ್ಯ ಡಿ.ಡಿ.ಟೋಪೋಜಿ ಹೇಳಿದರು. ಪಟ್ಟಣದ ಡಾ.ಜಿ.ವಿ.ನಾಯಿಕ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸವದತ್ತಿ ತಾಲೂಕುಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ರಾಮನಗೌಡ ಗೀದಿಗೌಡ್ರ ಅಧ್ಯತೆ ವಹಿಸಿದ್ದರು. ನಿವತ್ತ ಮುಖ್ಯೋಪಾಧ್ಯಾಯ ಬಿ.ಬಿ.ನಾವಲಗಟ್ಟಿ, ದೆಹಿಕ ಶಿಣ ಪರೀವೀಕ ಎಂ.ಜಿ. ಕೊಪ್ಪದ, ದೆಹಿಕ ಶಿಣ ಸಂಯೋಜಕ ಆರ್​.ಎಚ್​.ಪಾಟೀಲ, ಅಂತಾರಾಷ್ಟ್ರೀಯ ಕುಸ್ತಿಪಟು ಆನಂದ ಬಾಂಗಿ, ಸಂಸ್ಥೆಯ ಚೇರ್ಮನ್​ ಶ್ರೀಕಾಂತ ಮಿರಜಕರ, ಪ್ರಾಚಾರ್ಯ ಜಿ.ಎನ್​. ಅಲಮನ್ನವರ, ಶಂಕರ ರಾಠೋಡ, ದೆಹಿಕ ಶಿಕ್ಷಣ ನಿರ್ದೇಶಕ ಅಪ್ಪು ಹಿರಲಿಂಗನ್ನವರ, ಉಪನ್ಯಾಸಕ ಮಾಯಪ್ಪ ಕಟಿಗೆನ್ನವರ ಇತರರು ಇದ್ದರು.