ಸುರಪುರ: ಗೌರತ ಬುದ್ಧ ಜಗತ್ತಿಗೆ ಸರ್ವ ಶ್ರೇಷ್ಠ ಚಿಂತನೆ ನೀಡಿದ ಮಹಾನ್ ದಾರ್ಶನಿಕ ಎಂದು ಕಲಬುರಗಿಯ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಅರುಣ್ ಜೋಳದ ಕೂಡ್ಲಿಗಿ ಹೇಳಿದರು.
ಇಲ್ಲಿನ ತಹಸಿಲ್ ಕಚೇರಿಯಲ್ಲಿ ಹಮ್ಮಿಕೊಂಡ ಜಯಂತಿ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಗೌತಮ್ಮ ಬುದ್ಧ ನಾನು ದೇವರಲ್ಲ, ಸಾಮಾನ್ಯ ಮನುಷ್ಯ ಎಂಬುದನ್ನು ಹೇಳಿದ ಏಕೈಕ ವ್ಯಕ್ತಿ. ಎಲ್ಲ ರೀತಿಯ ಮೌಢ್ಯಗಳಿಂದ ಹೊರಬರಲು ತಿಳಿಸಿದೆ. ಜಗತ್ತಿನ ರೋಗ ಗುಣಪಡಿಸುವ ವೈದ್ಯ ಎಂದರು.
ತಹಸೀಲ್ದಾರ್‌ಎಚ್.ಎ.ಸರಕಾವಸ್ ಮಾತನಾಡಿದರು. ವಿಶೇಷ ಆಹ್ವಾನಿತರಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಭಗವಾನ್ ಬುದ್ಧರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು. ತಾಪಂ ಇಒ ಬಸವರಾಜ ಸಜ್ಜನ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ ಗುತ್ತೇದಾರ್, ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ವೇದಿಕೆಯಲ್ಲಿದ್ದರು.
ಶಾಸಕರ ಆಪ್ತ ಸಹಾಯಕ ಶಿವರಾಜ್ ಬೊಮ್ಮನಳ್ಳಿ, ಮುಖಂಡರಾದ ಮಾನಪ್ಪ ಕಟ್ಟಿಮನಿ, ನಿಂಗಣ್ಣ ಗೋನಾಲ, ಶಿವಶಂಕರ ಬೊಮ್ಮನಳ್ಳಿ, ಬಸವರಾಜ ದೊಡ್ಡಮನಿ ಶೆಳ್ಳಗಿ, ಹಣಮಂತ ಕಟ್ಟಿಮನಿ ಬೊಮ್ಮನಳ್ಳಿ, ವೀರಭದ್ರ ತಳವಾರಗೇರಾ, ಖಾಜಾ ಹುಸೇನ್ ಗುಡಗುಂಟಿ, ಯಲ್ಲಪ್ಪ ಹುಲಿಕಲ್, ಬಸವರಾಜ ಬೆನಕನಹಳ್ಳಿ, ದೇವಿಂದ್ರಪ್ಪ ಬಾದ್ಯಾಪುರ, ಜಟ್ಟೆಪ್ಪ ನಾಗರಾಳ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ದಲಿತ ಸಮಿತಿಯ ಮೂರ್ತಿ ಬೊಮ್ಮನಳ್ಳಿ ಪಂಚಶೀಲ ಪಠಿಸಿದರು. ಶಿಕ್ಷಕ ಸಾಹೇಬರೆಡ್ಡಿ ಇಟ್ಟಗಿ ನಿರೂಪಿಸಿ ವಂದಿಸಿದರು.