ಚಿಕ್ಕಮಗಳೂರಿನ ಮಲ್ಲಂದೂರು ರಸ್ತೆ ಸಮೀಪದ ಸ್ಪೂರ್ತಿ ಸೌಧದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ನಿಂದ ಏರ್ಪಡಿಸಿದ್ದ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರವನ್ನು ಶಾಸಕ ಎಚ್.ಡಿ.ತಮ್ಮಯ್ಯ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದರು. ಸಂದಾನAದ ಬಂಗೇರ, ರುದ್ರಪ್ಪ, ಅನಿಲ್ ಆನಂದ್ ಮತ್ತಿತರರಿದ್ದರು.  
ಜಿಲ್ಲೆ

ಸರ್ವ ಧರ್ಮದ ಮಕ್ಕಳಿಗೆ ಶಿಷ್ಯವೇತನ ಉತ್ತಮ ಕಾರ್ಯ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಸರ್ವ ಧರ್ಮದ ಮಕ್ಕಳನ್ನು ಸಮಾನವಾಗಿ ಗುರುತಿಸಿ ಶಿಷ್ಯವೇತ ನ ನೀಡುವ ಕಾರ್ಯ ಶ್ಲಾಘನೀಯವಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಎಲ್ಲ ಹಂತದಲ್ಲೂ ಟ್ರಸ್ಟ್ ಸ್ಪಂದಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ನಗರದ ಮಲ್ಲಂದೂರು ರಸ್ತೆ ಸಮೀಪದ ಸ್ಪೂರ್ತಿ ಸೌಧದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ನಿಂದ ಏರ್ಪಡಿಸಿದ್ದ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಳೆದ ಹದಿನೆಂಟು ವರ್ಷಗಳಿಂದ ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಬಡವರು ಹಾಗೂ ಲೋಕ ಕಲ್ಯಾಣಕ್ಕೆ ಧಾರ್ಮಿಕ, ಶೈಕ್ಷಣಿಕ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ. ವಿಶೇಷವಾಗಿ ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಸ್ವಸಹಾಯ ಸಂಘದಡಿ ಸಾಲ ಸೌಲಭ್ಯ ಕಲ್ಪಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಇAದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಶ್ರಮವಿಟ್ಟು ಅಭ್ಯಾಸಿಸಬೇಕು. ಹಿಂದಿನ ಕಾಲದಲ್ಲಿ ಉತ್ತೀರ್ಣರಾದರೆ ಸಾಕಾಗಿತ್ತು. ಆದರೀಗ ಸ್ಪರ್ಧೆಗಳು ಹೆಚ್ಚಿವೆ. ಜೊತೆಗೆ ಸರ್ಕಾರಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಪೂರ್ಣವಾಗಿ ಕೈಜೋಡಿಸಿದ ಕಾರಣ ಬಡವರು ಮಕ್ಕಳು ವಿದ್ಯಾಭ್ಯಾಸ ಪೂರೈಸಿ ಇಂದು ಉನ್ನ ತ ಅಧಿಕಾರಿಗಳಾಗಿದ್ದಾರೆ ಎಂದು ತಿಳಿಸಿದರು.

ಗ್ರಾಮಾಭೀವೃದ್ದಿ ಯೋಜನೆಯ ಸೌಲಭ್ಯ ಪಡೆದುಕೊಂಡಿರುವ ಫಲಾನುಭವಿಗಳು ದುಂದುವೆಚ್ಚಗಳಿಗೆ ಹಣವನ್ನು ವ್ಯಯಿಸದೇ, ಮಕ್ಕಳ ವಿದ್ಯಾಭ್ಯಾಸ ಹಾಗೂ ಮದುವೆಗಳಿಗೆ ಬಳಸಿಕೊಂಡಲ್ಲಿ ಧರ್ಮಾಧಿಕಾರಿಗಳ ಸದುz್ದೆÃಶವು ಈಡೇರಿದಂತಾಗುತ್ತದೆ. ಜೊತೆಗೆ ಸಮಾಜದ ಮುನ್ನೆಲೆಗೆ ಬರಲು ಸಾಧ್ಯವಾಗಲಿದೆ ಎಂದರು.

ಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ದುಶ್ಚಟ ಅಥವಾ ಆಮಿಷಕ್ಕೆ ಒಳಗಾಗದೇ ತಪ್ಪಿನ ನಿರ್ಧಾರವನ್ನು ಕೈಗೊಳ್ಳದಿರಿ. ವಿದ್ಯೆ ಎಂಬ ತಪಸ್ಸನ್ನು ಸಂಪೂರ್ಣಗೊಳಿಸಿದರೆ ಜೀವನವೆಂಬ ಬಂಡಿಯನ್ನು ಸುಲಭವಾಗಿ ಎಳೆದೊಯ್ಯಬಹುದು. ಹೀಗಾಗಿ ಪಾಲಕರ ಕನಸನ್ನು ನನಸುಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃಧ್ದಿ ಟ್ರಸ್ಟ್ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿ, ಕಳೆದ ಹದಿನಾರು ವರ್ಷಗಳಿಂದ ತಾಲೂಕಿನಲ್ಲಿ ಸುಮಾರು ೮೫೭ ವಿದ್ಯಾರ್ಥಿಗಳಿಗೆ ೧.೨೬ ಕೋಟಿ ರೂ.ಗಳಷ್ಟು ಸುಜ್ಞಾನ ನಿಧಿ ಶಿಷ್ಯವೇತನ ವಿತರಿಸಲಾಗಿದೆ. ಕುಡಿತದಿಂದ ದಾಸರಾದ ೧೫೦೦ಕ್ಕೂ ಹೆಚ್ಚು ಮಂದಿಗೆ ಮದ್ಯವರ್ಜನ ಶಿಬಿರ ಆಯೋಜಿಸಿ ಬಡವರ ಬದುಕನ್ನು ಶ್ರೀಮಂತಗೊಳಿಸಲಾಗಿದೆ ಎಂದರು.

ಯೋಜನಾಧಿಕಾರಿ ರಮೇಶ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ೧೫೮ ವಿದ್ಯಾರ್ಥಿಗಳನ್ನು ಗುರುತಿಸಿ ಸುಜ್ಞಾನನಿಧಿ ಶಿಷ್ಯವೇತನ ವಿತರಿಸಲಾಗಿದೆ. ಜೊತೆಗೆ ಗ್ರಾಮಸ್ಥರ ಸಹಕಾರದಿಂದ ೧೬ ಕೆರೆಗಳ ಹೂಳು ತೆಗೆದಿz್ದÉÃವೆ. ೧೮ ದೇವಾಲಗಳನ್ನು ಸಂಪೂರ್ಣವಾಗಿ ಜೀರ್ಣೋದ್ದಾರ ಮಾಡಲಾಗಿದೆ. ವಿಶೇಷಚೇತನ ಮಕ್ಕ ಳಿಗೆ ಉಚಿತವಾಗಿ ಪರಿಕರ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಅನಿಲ್ ಆನಂದ್, ಎಸ್‌ಡಿಎಂ ಮಂಜು, ದಶರಥ ರಾಜ್‌ಅರಸ್, ನಜ್ಮಾಆಲಿ, ಕುಮಾರ್‌ಶೆಟ್ಟಿ, ಮುಖಂಡ ಕೋಟೆ ಮಲ್ಲೇಶ್, ಯೋಜನಾಧಿಕಾರಿ ರೂಪಾ ಮತ್ತಿತರರು ಉಪಸ್ಥಿತರಿದ್ದರು.