ಜಿಲ್ಲೆ

ಸರ್ಕಾರಿ ಸಂಸ್ಥೆಗಳ ಖಾಸಗೀಕರಣದಿಂದ ಅಪಾಯ, ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ

ಹಾಸನ: ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದರೆ ಅಪಾಯಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.

ಎಲ್ ಐಸಿ, ವಾರ್ಷಿಕ 7500 ಕೋಟಿ ರೂ. ಲಾಭ ಬರುವ ಬಿಪಿಸಿಎಲ್, ಇಂಡಿಯನ್ ಏರ್ಲೈನ್ಸ್ ಮಾರಾಟ, ಬ್ಯಾಂಕುಗಳ ವಿಲೀನ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಧಾನಸೌಧ, ಲೋಕಸಭೆಯನ್ನೂ ಮಾರಿಬಿಡಿ, ಪ್ರಧಾನಿ ಮೋದಿಯವರೇ ತಕ್ಷಣವೇ ಈ ತೀರ್ಮಾನ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದಲ್ಲಿ ಆದಾಯ ಖೋತಾ ಆಗಿದೆ. ಬೆಳಗ್ಗೆದ್ದು ಕುಡಿಯುವ ಕಾಫಿಯಿಂದ ಎಲ್ಲದ್ದಕ್ಕೂ ಪ್ರಜೆ ತೆರಿಗೆ ಕಟ್ಟುತ್ತಾನೆ. ಎಲ್ಲ ವಿವರ ತಿಳಿಯುವುದು ನಮ್ಮ ಹಕ್ಕು ಎಂದು ಪ್ರತಿಪಾದಿಸಿದರು.