ಚಿಕ್ಕಮಗಳೂರಿನ ಸಂಜೀವಿನಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವದ `ಕಲರವ ಸಂಭ್ರಮ-ಸಡಗರ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಬಿ.ಸಿ.ಸುಜಾತ ಶಿವಕುಮಾರ್ ಉದ್ಘಾಟಿಸಿದರು. ಕೋಟ ಶ್ರೀನಿವಾಸ ಪೂಜಾರಿ, ಎಚ್.ಸಿ.ಕಲ್ಮರುಡಪ್ಪ, ಎಸ್.ಆರ್.ಹೇಮಾ ಮತ್ತಿತರರಿದ್ದರು. 
ಜಿಲ್ಲೆ

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣ

ಚಿಕ್ಕಮಗಳೂರು: ರಾಜ್ಯದಲ್ಲಿ ೪೮ ಸಾವಿರ ಸರ್ಕಾರಿ ಶಾಲೆಗಳಿದ್ದು, ನಿತ್ಯ ಒಂದು ಕೋಟಿ ಮಕ್ಕಳಿಗೆ ಬಿಸಿಯೂಟ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದರೂ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿಷಾದ ವ್ಯಕ್ತಪಡಿಸಿದರು.

ನಗರದ ಸಂಜೀವಿನಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಮಕ್ಕಳ `ಕಲರವ ಸಂಭ್ರಮ-ಸಡಗರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ವ್ಯವಸ್ಥೆ, ಬಿಸಿಯೂಟ, ಪುಸ್ತಕ, ಬ್ಯಾಗು, ಚಪ್ಪಲಿ ಸಹಿತ ಎಲ್ಲಾ ಖರ್ಚುಗಳನ್ನು ಸರ್ಕಾರವೇ ನೋಡಿಕೊಂಡರೂ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ಕಳೆದ ೪೩ ವರ್ಷಗಳ ಹಿಂದೆ ಪೇಜಾವರ ಮಠದ ಹಿರಿಯ ಯತಿಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹುಟ್ಟು ಹಾಕಿದ ಸಂಜೀವಿನಿ ವಿದ್ಯಾಸಂಸ್ಥೆ ಸರ್ಕಾರದಿಂದ ಹಣವನ್ನೆ ಪಡೆಯದೆ ನಡೆಯುತ್ತಿದೆ. ಇಲ್ಲಿ ೫೪೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರೆ ಅದೊಂದು ದೊಡ್ಡ ಘನತೆ. ನನ್ನ ಜಾತಿಗಿಂತ, ಧರ್ಮಕ್ಕಿಂತ, ಬದುಕಿಗಿಂತ, ಪ್ರಾಣಕ್ಕಿಂತ ನನ್ನ ದೇಶ ಶ್ರೇಷ್ಠ ಎನ್ನುವಂತಹ ಸರ್ವ ಶ್ರೇಷ್ಠ ರಾಷ್ಟçಭಕ್ತರನ್ನು ನೀಡುವ ಸಂಸ್ಥೆಯಾಗಿ ಸಂಜೀವಿನಿ ಶಾಲೆ ರೂಪುಗೊಳ್ಳುತ್ತಿದೆ. ಹಿರಿಯ ಶ್ರೀಗಳು ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶಿಕ್ಷಣಕ್ಕೆ, ಆರೋಗ್ಯಕ್ಕೆ ಒತ್ತು ಕೊಟ್ಟವರು. ಎಲ್ಲ ಜಾತಿ, ಧರ್ಮೀಯರನ್ನು ಒಗ್ಗೂಡಿಸಿಕೊಂಡು ಹೋಗುವಂತಹ ಸಾಮರ್ಥ್ಯವುಳ್ಳ ಕೆಲವೇ ಕೆಲವು ಶ್ರೀಗಳಲ್ಲಿ ಅವರೂ ಒಬ್ಬರು ಎಂದರು.

ಇದೇ ವೇಳೆ ಪೇಜಾವರದ ಹಿರಿಯ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಪ್ರಸ್ತುತ ಪೇಜಾವರ ಮಠಾಧೀಶರಾದ ಡಾ.ವಿಶ್ವಪ್ರಸನ್ನ ತೀರ್ಥರು ಆನ್‌ಲೈನ್‌ನಲ್ಲಿ ಸಂಪರ್ಕಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಬಿ.ಸಿ.ಸುಜಾತ ಶಿವಕುಮಾರ್ ಮಾತನಾಡಿ, ಮಕ್ಕಳು ಶಾಲೆಗೆ ಮೊಬೈಲ್ ತರಬಾರದು ಎನ್ನುವ ನಿಯಮ ರೂಪಿಸಲಾಗಿತ್ತು. ಕರೋನಾ ಕಾಡಿದ ವೇಳೆ ಶಾಲೆಯೇ ಮೊಬೈಲ್‌ಗೆ ಬರುವಂತಾಯಿತು. ಇಂದು ಮಕ್ಕಳು ಮೊಬೈಲ್ ಗೀಳಿಗೆ ಒಳಗಾಗಿದ್ದಾರೆ. `ನೀನು ತಲೆ ತಗ್ಗಿಸಿ ನನ್ನನ್ನು ನೋಡಿದರೆ ನಿನ್ನನ್ನು ತಲೆಯೆತ್ತದಂತೆ ಮಾಡುತ್ತೇನೆ ಎಂದು ಮೊಬೈಲ್ ಹೇಳಿದರೆ, `ನೀನು ತಲೆ ತಗ್ಗಿಸಿ ನನ್ನನ್ನು ನೋಡಿದರೆ ನಿನ್ನನ್ನು ತಲೆಯೆತ್ತಿ ಮೆರೆಯುವಂತೆ ಮಾಡುತ್ತೇನೆ ಎಂದು ಪುಸ್ತಕ ಹೇಳುತ್ತದೆ. ಈ ನಿಟ್ಟಿನಲ್ಲಿ ಓದಿನತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕು. ಪಾಲಕರು ಮಕ್ಕಳ ಮೇಲೆ ನಿಗಾ ಇಡಬೇಕು ಎಂದು ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷೆ ಎಸ್.ಶಾಂತಕುಮಾರಿ ಮಾತನಾಡಿ, ೧೯೮೨ರಲ್ಲಿ ಈ ವಿದ್ಯಾಸಂಸ್ಥೆ ನಮ್ಮ ಹಿರಿಯ ಶ್ರೀÃಗಳ ಆಶೋತ್ತರಗಳಿಂದಲೇ ಆರಂಭವಾಗಿದೆ. ಅದನ್ನು ಕಿರಿಯ ಶ್ರೀಗಳು ಮುಂದುವರಿಸುತ್ತಿದ್ದಾರೆ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಅತ್ಯುನ್ನತ ಹುದ್ದೆಗಳಲ್ಲಿದ್ದಾರೆ. ಇದೀಗ ಶಾಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಸುಮಾರು ೫೦ ಲಕ್ಷ ರೂ.ಗಳ ಅವಶ್ಯಕತೆ ಇದ್ದು, ಸಂಸದರು ಹಾಗೂ ಶಾಸಕರು ಸರ್ಕಾರದಿಂದ ಅನುದಾನ ಒದಗಿಸುವಂತೆ ಕೋರಿದರು.

ಸಂಸ್ಥೆಯ ಪ್ರಾಚಾರ್ಯೆ ಎಸ್.ಆರ್.ಹೇಮಾ ವಾರ್ಷಿಕ ವರದಿ ಓದಿದರು. ಜಿಪಂ ಮಾಜಿ ಸದಸ್ಯ ಎಚ್.ಸಿ.ಕಲ್ಮರುಡಪ್ಪ, ಖಜಾಂಚಿ ಎಂ.ಪುAಡರೀಕಾಕ್ಷ ಉಡುಪ, ಆಡಳಿತ ಮಂಡಳಿ ಸದಸ್ಯರಾದ ನಾರಾಯಣ ಮಲ್ಯ, ಡಾ.ಪಿ.ಮೋಹನ್, ಲೀಲಾಧರ್ ಪಟೇಲ್ ಮತ್ತಿತರರಿದ್ದರು.