ಬಾಗೇಪಲ್ಲಿ : ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಾರ್ಗದರ್ಶನದಂತೆ ದುಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ವಾದರಿ ಶಾಲೆಗಳನ್ನಾಗಿ ಪರಿವರ್ತನೆ ವಾಡಲಾಗುತ್ತದೆ ಎಂದು ಬಿಬಿಎಂಪಿ ವಾಜಿ ಸದಸ್ಯ ಬಿ.ಎಸ್.ವೆಂಕಟಸ್ವಾಮಿ ನಾಯ್ಡು ಹೇಳಿದರು.
ತಾಲೂಕಿನ ಜೂಲಪಾಳ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ವಾತನಾಡಿದರು.ತಾಲೂಕಿನ ಭೋಡಿಕದಿರೇಪಲ್ಲಿಯವನಾದ ನಾನು ಸದ್ಯ ಬೆಂಗಳೂರಿನಲ್ಲಿದ್ದು, ನಮ್ಮ ಪೂರ್ವಿಕರು ಜೂಲಪಾಳ್ಯ ಸರ್ಕಾರಿ ಶಾಲೆಗೆ 6 ಎಕರೆ ಹಾಗೂ ಸರ್ಕಾರಿ ಆಸ್ಪತೆಗೂ ಜಮೀನು ದಾನ ವಾಡಿದ್ದಾರೆ.
ಹುಟ್ಟೂರಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಆಲೋಚನೆ ಬಂದಾಗ ದುಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳ ನೆನಪಾಯಿತು. ಹಾಗಾಗಿ ಜೂಲಪಾಳ್ಯ ಕ್ಲಸ್ಟರ್ ವ್ಯಾಪ್ತಿಯ ಭೋಡಿಕದಿರೇಪಲ್ಲಿ, ವೆಂಕಟಾಪುರ, ಜೂಲಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪೋಲೇರಮ್ಮ ಪ್ರೌಢ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಬಿಇಒ ಎಸ್.ಸಿದ್ದಪ್ಪ ವಾತನಾಡಿ, ದಾನಿಗಳಾದ ಬಿ.ಎಸ್.ವೆಂಕಟಸ್ವಾಮಿ ನಾಯ್ಡು, ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಮೂಲಸೌಕರ್ಯ ಅಭಿವೃದ್ಧಿಗಾಗಿ ಅಂದಾಜು 1 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಪಟ್ಟಿ ಸಿದ್ಧಪಡಿಸಿ ಸರ್ಕಾರಿ ಶಾಲೆಗಳಿಗೆ ಬಲವರ್ಧನೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಶಾಂತ್, ಲಚ್ಚಪ್ಪ, ಮುಖಂಡರಾದ ಹರೀಶ್, ಜಯರಾಂ, ಜೈಪಾಲ್ ನಾಯ್ಡು, ಮನೋಹರನಾಯ್ಡು, ಕ್ಷೇತ್ರ ಸಮನ್ವಯ ಅಧಿಕಾರಿ ವೆಂಕಟರಾಮ್, ಇಸಿಒ ಬಿ.ಆಂಜನೇಯರೆಡ್ಡಿ, ಸರ್ಕಾರಿ ನೌಕರರ ಸಂದ ಗೌರವಾಧ್ಯಕ್ಷ ಆರ್.ಹನುಮಂತರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಅಧ್ಯಕ್ಷ ಪಿ.ವೆಂಕಟರವಣಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನರಸಿಂಹಾರೆಡ್ಡಿ, ಸಿಆರ್‌ಪಿ ನರಸಿಂಹಪ್ಪ, ಮುಖ್ಯ ಶಿಕ್ಷಕಿ ಅಂಜಿನಮ್ಮ ಮತ್ತಿತರರು ಇದ್ದರು.