ಕೋಲಾರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟಕ್ಕೆ ಆಯ್ಕೆಯಾದ ಬಾಳೆಹೊನ್ನೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಎಸ್‌ಡಿಎಂಸಿ, ಶಿಕ್ಷಕರು ಬೀಳ್ಕೊಟ್ಟರು. ಮಹೇಶ್ ಆಚಾರ್ಯ, ಕೊಟ್ರೇಶಪ್ಪ, ರಮೇಶ್, ಸುಮನಾ ಇತರರಿದ್ದರು. 
ಜಿಲ್ಲೆ

ಸರ್ಕಾರಿ ಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗೆ

ಬಾಳೆಹೊನ್ನೂರು: ಕೋಲಾರದಲ್ಲಿ ನ.8ರಿಂದ ನಡೆಯಲಿರುವ ರಾಜ್ಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಪಟ್ಟಣದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಗುರುವಾರ ಎಸ್‌ಡಿಎಂಸಿ ಹಾಗೂ ಶಿಕ್ಷಕರು ಬೀಳ್ಕೊಟ್ಟರು.

ವಿದ್ಯಾರ್ಥಿಗಳಾದ ಮಹಮ್ಮದ್ ಆತೀಫ್, ಮಹಮ್ಮದ್ ಸಲೀತ್, ಅಮೋಘ್, ಸಮಂತ್, ಆತೀಫ್, ಮಹಮ್ಮದ್ ಹಕೀಮ್, ರಮಿತ ಆರ್. ಪೂಜಾರಿ, ಸನಾ, ರಾಜೇಶ್ವರಿ, ವಿನುತಾ, ಫಾತಿಮಾ ಸುನೈನಾ, ಸುಶ್ಮಿತಾ, ಎಸ್.ಸಮರ್ಥ್, ಶ್ರೇಯಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷ ಎಂ.ಜೆ.ಮಹೇಶ್ ಆಚಾರ್ಯ ಮಾತನಾಡಿ, ನ.8ರಿಂದ ಕೋಲಾರ ಮತ್ತು ಶಿವಮೊಗ್ಗದಲ್ಲಿ ಎರಡು ಕಡೆಗಳಲ್ಲಿ ರಾಜ್ಯಮಟ್ಟದ ಪ್ರೌಢಶಾಲಾ ವಿಭಾಗದ ವಿವಿಧ ಸ್ಪರ್ಧೆಗಳು ನಡೆಯಲಿವೆ. ಪಂದ್ಯಾವಳಿಯಲ್ಲಿ ಸರ್ಕಾರಿ ಪ್ರೌಢಶಾಲೆಯ 15 ವಿದ್ಯಾರ್ಥಿಗಳು ಮೊದಲ ಬಾರಿಗೆ ಆಯ್ಕೆಯಾಗಿದ್ದು ಹೆಮ್ಮೆಯ ವಿಚಾರ ಎಂದರು. ಮುಖ್ಯಶಿಕ್ಷಕ ಕೊಟ್ರೇಶಪ್ಪ, ಶಿಕ್ಷಕರಾದ ರಮೇಶ್, ತಮನ್ನಾ ಮುನಾವರ್, ಸುಮನಾ, ಪಾಲಕರಾದ ರವಿ, ವೀಣಾ ಇತರರಿದ್ದರು.