ಶ್ರೀರಂಗಪಟ್ಟಣ: ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಎಂದಿಗೂ ಹಿಂಜರಿಯದೆ ಎಲ್ಲೇ ಆದರೂ ಸರಿ ಎದೆತಟ್ಟಿ ಸರ್ಕಾರಿ ಶಾಲೆ ವಿದ್ಯಾರ್ಥಿ ಎಂದು ಹೆಮ್ಮೆಯಿಂದ ಹೇಳಿ ಎಂದು ಉದ್ಯಮಿ ದೊಡ್ಡೇಗೌಡನಕೊಪ್ಪಲು ಮಧುಸೂದನ್ ಸಲಹೆ ನೀಡಿದರು.
ಪಟ್ಟಣದ ಗುರುಭವನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಾಲೆ ಸಹಯೋಗದಲ್ಲಿ ಮೈತ್ರಿ ಸಮೂಹ ಸಂಸ್ಥೆ ವಿದ್ಯಾರ್ಥಿಗೆ ಆಯೋಜಿಸಿದ್ದ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು ಮಾತನಾಡಿ, ಯಾವುದೇ ಸ್ವಾರ್ಥ ಇಲ್ಲದೆ ತವರಿನ ಪ್ರೀತಿಗಾಗಿ ಕ್ಷೇತ್ರದ ಸರ್ಕಾರಿ ಶಾಲೆಗಳು ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ ನೀಡಿ ನೆರವಾಗುತ್ತಿರುವುದು ಮಾದರಿಯಾಗಲಿ ಎಂದು ಹೇಳಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಂ.ಚಿ.ಸಣ್ಣಸ್ವಾಮಿಗೌಡ, ಮುಖ್ಯ ಶಿಕ್ಷಕ ರವೀಂದ್ರ, ಕ್ಷೇತ್ರ ಶಿಕ್ಷಣ ಸಂಯೋಜಕಿ ಡಾ.ಪ್ರತಿಮಾ, ರೈತ ಮುಖಂಡ ತುಳಸಿದಾಸ್, ಮುಖ್ಯ ಶಿಕ್ಷಕಿ ಜಸಿಂತಾ, ಶಿಕ್ಷಕರಾದ ಗೀತಾ, ಕಾಂಚನಾ, ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್, ಎನ್.ಎನ್.ಪ್ರಕಾಶ್ ಇತರರು ಹಾಜರಿದ್ದರು.