ಜಿಲ್ಲೆ

ಸರ್ಕಾರಿ ಶಾಲೆ ಮಕ್ಕಳಿಗೆ ಚಿಣ್ಣರ ವನ ದರ್ಶನ

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ನೆಲಮಂಗಲ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ವತಿಯಿಂದ ’ಚಿಣ್ಣರ ವನ ದರ್ಶನ’ ಕಾರ್ಯಕ್ರಮದಡಿ ಸೋಂಪುರ ಹೋಬಳಿಯ ಹೊನ್ನೇನಹಳ್ಳಿ, ಅವ್ವೇರಹಳ್ಳಿ ಹಾಗೂ ಬರಗೇನಹಳ್ಳಿ ಸರ್ಕಾರಿ ಶಾಲೆಗಳ 100 ವಿದ್ಯಾರ್ಥಿಗಳನ್ನು ಬನ್ನೇರುಘಟ್ಟ ಪ್ರಕೃತಿ ಶಿಬಿರಕ್ಕೆ ಕರೆದುಕೊಂಡು ಹೋಗಿ ಅರಣ್ಯ, ಪ್ರಾಣಿ ಪಕ್ಷಿಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.
ಸೆ.11ರಿಂದ 14ರವರೆಗೆ ವನ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೊದಲ ಹಂತದಲ್ಲಿ ಹೊನ್ನೇನಹಳ್ಳಿ ಶಾಲೆಯ 50 ಮಕ್ಕಳು, ಎರಡನೇ ಹಂತದಲ್ಲಿ ಅವ್ವೇರಹಳ್ಳಿ ಮತ್ತು ಬರಗೇನಹಳ್ಳಿ ಶಾಲೆಗಳ 50 ಮಕ್ಕಳನ್ನು ಶಿಬಿರಕ್ಕೆ ಕರೆದುಕೊಂಡು ಹೋಗಲಾಗಿತ್ತು, 4ರಿಂದ 7ನೇ ತರಗತಿ ಮಕ್ಕಳನ್ನು ಇದಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಪ್ರಕೃತಿ ಶಿಬಿರಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುವ ಮಾರ್ಗದಲ್ಲಿ ವಲಯ ಅರಣ್ಯಾಧಿಕಾರಿ ಕಚೇರಿ ಹಾಗೂ ನರ್ಸರಿಗೆ ಕರೆದುಕೊಂಡು ಹೋಗಿ ಹಲವು ಮಾಹಿತಿ ಒದಗಿಸಲಾಯಿತು, ಪ್ರಕೃತಿ ಶಿಬಿರದಲ್ಲಿ ಮಕ್ಕಳಿಗೆ ಜೂ, ಬಟರ್ ಫ್ಲೈ ಕ್ಯಾಂಪ್ ವೀಕ್ಷಣೆ ಜತೆಗೆ ಸಫಾರಿಗೆ ಕರೆದುಕೊಂಡು ಹೋಗಿ ಪ್ರಾಣಿ, ಪಕ್ಷಿಗಳ ಕುರಿತು ಅರಿವು ಮೂಡಿಸಲಾಯಿತು.


ಮಕ್ಕಳನ್ನು ಕಾಲ್ನಡಿಗೆ ಮೂಲಕ ಸುಮಾರು 2 ಕಿಲೋ ಮೀಟರ್ ಕರೆದುಕೊಂಡು ಅರಣ್ಯ, ಪಕ್ಷಿ, ಪ್ರಾಣಿಗಳ ಬಗ್ಗೆ ವಿವರಿಸಲಾಯಿತು.
ವನ್ಯಜೀವಿ, ಅರಣ್ಯ ಹಾಗೂ ಪರಿಸರದ ಬಗ್ಗೆ ಸಂಪನ್ಮೂಲ ವ್ಯಕ್ತಿ ಯಶವಂತ್ ಉಪನ್ಯಾಸ ನೀಡಿದರು. ವಿವಿಧ ಆಟಗಳ ಮೂಲಕವೂ ಮಕ್ಕಳಿಗೆ ಅರಣ್ಯ, ಪರಿಸರ ಉಳಿವಿನ ಕುರಿತು ತಿಳಿಸಿಕೊಡಲಾಯಿತು ಎಂದು ನೆಲಮಂಗಲ ಪ್ರಾದೇಶಿಕ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ತಿಳಿಸಿದರು.

ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಿಂದ ಪ್ರಕೃತಿ ಶಿಕ್ಷಣಕ್ಕಾಗಿ ಸಭೆ ನಡೆಸಿ, ಅಲ್ಲಿ ಅರಣ್ಯ, ವನ್ಯಜೀವಿ, ಪರಿಸರದ ಮಾಹಿತಿ ನೀಡಲಾಯಿತು, ಮಕ್ಕಳಿಗೆ ಪ್ರಕೃತಿ ಸಂಬಂಧಿತ ಆಟಗಳು ಆಡಿಸಲಾಯಿತು. ರಸಪ್ರಶ್ನೆ, ಅಭಿನಯಗಳು ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ನಾಟಕಗಳ ಮೂಲಕ ಮಕ್ಕಳನ್ನು ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರು.ಹರೀಶ್‌ಕುಮಾರ್ ಶಿಕ್ಷಕರು, ಬರಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲವು ಜಾತಿಯ ಪ್ರಾಣಿಗಳು, ಪಕ್ಷಿಗಳನ್ನು ನೇರವಾಗಿ ನೋಡುವ ಅವಕಾಶ ಸಿಕ್ಕಿತು. ಇಂತಹದೊಂದು ಅವಕಾಶ ಮಾಡಿಕೊಟ್ಟ ಅರಣ್ಯ ಇಲಾಖೆಗೆ ಧನ್ಯವಾದಗಳು.ಹಂಸಿಕಾ ಕುಮಾರಿ7ನೇ ತರಗತಿ ವಿದ್ಯಾರ್ಥಿನಿ, ಬರಗೇನಹಳ್ಳಿ ಶಾಲೆ ಶಿಬಿರದಲ್ಲಿ ಅರಣ್ಯ ಸಾಕ್ಷ್ಯಚಿತ್ರ ವೀಕ್ಷಣೆ ಮಾಡಿಸಿದರು. ಅರಣ್ಯ ನಡಿಗೆ, ಸಣ್ಣ ಚಾರಣ, ಪಕ್ಷಿ ವೀಕ್ಷಣೆ, ಸಫಾರಿ ವ್ಯವಸ್ಥೆ ಮಾಡಿದ್ದರು. ಸಾಕಷ್ಟು ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಂಡೆವು.ದಿವ್ಯಾ7ನೇ ತರಗತಿ ವಿದ್ಯಾರ್ಥಿನಿ ಹೊನ್ನೇನಹಳ್ಳಿ