filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43; 
ಜಿಲ್ಲೆ

ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ಆಹಾರಮೇಳ

ಚಾಮರಾಜನಗರ: ಸರ್ಕಾರಿ ಶಾಲೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ರೋಟರಿ ಸಿಲ್ಕ್ ಸಿಟಿ ವತಿಯಿಂದ ಡಿ.14 ಮತ್ತು 15 ರಂದು ಆಹಾರಮೇಳ, ವಸ್ತು ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿಭಿನ್ನ ಪ್ರಯತ್ನ ಮಾಡಲಾಗುತ್ತಿದೆ.

ತಾಲೂಕಿನ ಮೂಕನಪಾಳ್ಯ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1-6ನೇ ತರಗತಿಯ ವರೆಗೆ ಸುಮಾರು 30 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೇ ಇರುವ ಒಂದು ಶಾಲಾ ಕೊಠಡಿಯು ಸೋರುತ್ತಿದ್ದು, ಮಕ್ಕಳು ಕುಳಿತು ಪಾಠವನ್ನು ಕೇಳಲು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ನಿಟ್ಟನಲ್ಲಿ ಶಾಲೆಯ ಸಮೀಪದಲ್ಲಿ ಇರುವ ಸಮುದಾಯ ಭವನವನ್ನು ಅವಲಂಬಿಸಿದ್ದರು.

ಈ ಸಮಸ್ಯೆಯನ್ನು ಅರಿತುಕೊಂಡ ಚಾಮರಾಜನಗರ ರೋಟರಿ ಸಿಲ್ಕ್ ಸಿಟಿ ಸಂಸ್ಥೆಯ ಪದಾಧಿಕಾರಿಗಳು ವಿಭಿನ್ನವಾದ ಆಲೋಚನೆ ಮಾಡಿ, ಇದೇ ಡಿ.14 ಮತ್ತು 15 ರಂದು ನಗರದ ಶ್ರೀಸಿದ್ದಮಲ್ಲೇಶ್ವರ ವಿರಕ್ತ ಮಠದ ಆವರಣದಲ್ಲಿ ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ಆಹಾರ ಮೇಳ, ವಸ್ತುಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ, ಅದರಲ್ಲಿ ಬರುವ ಹಣದಲ್ಲಿ ಮೂಕನಪಾಳ್ಯ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಸರ್ವತೋಮುಖ ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ.

ಆಹಾರಮೇಳ ಮತ್ತು ವಸ್ತು ಪ್ರದರ್ಶನ:

ನಗರದ ಶ್ರೀಸಿದ್ಧಮಲ್ಲೇಶ್ವರ ವಿರಕ್ತ ಮಠದ ಆವರಣದಲ್ಲಿ ಡಿ.14 ರಂದು ಬೆಳಗ್ಗೆ 10 ಗಂಟೆಗೆ ಶ್ರೀಚನ್ನಬಸವಸ್ವಾಮೀಜಿ ವಸ್ತುಪ್ರದರ್ಶನಕ್ಕೆ ಚಾಲನೆ ನೀಡುವರು. ಸಂಜೆ 5 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆಹಾರಮೇಳಕ್ಕೆ ಚಾಲನೆ ನೀಡಲಿದ್ದಾರೆ. ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ವಿಕ್ರಮ್ ದತ್ತಾ, ನಗರಸಭಾ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮಮತಾ ಬಾಲಸುಬ್ರಹ್ಮಣ್ಯ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಸ್ತು ಪ್ರದರ್ಶನ ಮತ್ತು ಆಹಾರ ಮೇಳದಲ್ಲಿ ಮಠದ ಒಳಾವರಣದಲ್ಲಿ 20 ಮಳಿಗೆ ಮತ್ತು ಹೊರಾಂಗಣದಲ್ಲಿ 17 ಮಳಿಗೆಗಳನ್ನು ತೆರೆಯಲಾಗುತ್ತದೆ. ಆಹಾರ ಮೇಳದಲ್ಲಿ ಉತ್ತರ ಭಾರತದ ಹಲವು ತಿನಿಸುಗಳಲ್ಲದೇ, ಸಿರಿಧಾನ್ಯದ ತಿನಿಸುಗಳು ಹಾಗೂ ನೂರಾರು ತಿಂಡಿತಿನಿಸುಗಳು ದೊರೆಯಲಿದೆ. ವಸ್ತು ಪ್ರದರ್ಶನಕ್ಕೆ ಉಚಿತ ಪ್ರವೇಶವಿದ್ದು, ಆಹಾರಮೇಳಕ್ಕೆ ಸಂಜೆ 4 ಗಂಟೆಯ ಗಂಟೆಯ ಬಳಿಕ ಒಬ್ಬರಿಗೆ 20 ರೂ, ಪ್ರವೇಶ ದರವನ್ನು ನಿಗದಿಪಡಿಸಲಾಗಿದೆ.

ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ:

ಡಿ.14 ರಂದು ಸಂಜೆ 4 ಗಂಟೆಗೆ ಅಂತರಾಷ್ಟ್ರೀಯ ವೇಣುವಾದನ ವಿದ್ವಾಂಸರಾದ ಮೈಸೂರು ಎ.ಚಂದನ್‌ಕುಮಾರ್ ಅವರಿಂದ ವೇಣುವಾದನ ಮತ್ತು ಖ್ಯಾತ ಚಲನಚಿತ್ರ ಹಾಸ್ಯ ನಟರಾದ ಮಿಮಿಕ್ರಿ ಗೋಪಿ ಅವರಿಂದ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಡಿ.15 ರಂದು ಸಂಜೆ 4 ಗಂಟೆಗೆ ಎದೆತುಂಬಿ ಹಾಡುವೆನು ಖ್ಯಾತಿಯ ಪಿ.ಜೈನ್ ಅವರಿಂದ ಭಾವಗೀತೆ ಕಾರ್ಯಕ್ರಮ ಹಾಗೂ ಜಾದುಗಾರ ಗುರುಸ್ವಾಮಿ ಅವರಿಂದ ಮಾತನಾಡುವ ಗೊಂಬೆ ಮತ್ತು ಮ್ಯಾಜಿಕ್ ಷೋ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಜಿಲ್ಲಾ ಕೇಂದ್ರದಲ್ಲಿ ಇದೇ ಮೊದಲ ಬಾರಿಗೆ ರೋಟರಿ ಸಿಲ್ಕ್ ಸಿಟಿ ವತಿಯಿಂದ ಆಹಾರಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಮೂಲಕ ಸರ್ಕಾರಿ ಶಾಲೆಗಳ ಉಳಿವಿನ ಜತೆಗೆ, ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಆಹಾರ ಸಂಸ್ಕೃತಿಯನ್ನು ಪರಿಚಯಿಸಲಾಗುತ್ತಿದೆ.

-ಗಿರೀಶ್ ದೊಡ್ಡರಾಯಪೇಟೆ, ಮಾಜಿ ಅಧ್ಯಕ್ಷ, ರೋಟರಿ ಸಂಸ್ಥೆ, ಚಾಮರಾಜನಗರ

ರೋಟರಿ ಸಿಲ್ಕ್ ಸಿಟಿ ವತಿಯಿಂದ ಪ್ರತಿವರ್ಷ ಒಂದೊಂದು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡಿ ಅಭಿವೃದ್ಧಿಗೊಳಿಸಲು ಮುಂದಾಗಿದ್ದೇವೆ. ಅದರಂತೆ ಈ ಬಾರಿ ಮೂಕನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಸರ್ವತೋಮುಖ ಅಭಿವೃದ್ಧಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

-ಮಾಣಿಕ್ ಚಂದ್ ಸೀರ್ವಿ, ಜಿಲ್ಲಾಧ್ಯಕ್ಷ, ರೋಟರಿ ಸಿಲ್ಕ್ ಸಿಟಿ, ಚಾಮರಾಜನಗರ