ಚಿಕ್ಕಮಗಳೂರಿನ ಗಾಂಧಿ ನಗರದಲ್ಲಿರುವ ಸರ್ಕಾರಿ ವಿಶೇಷ ದತ್ತು ಸಂಸ್ಥೆಗೆ ಬಿಎಸ್‌ಪಿ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆ.ಟಿ.ರಾಧಾಕೃಷ್ಣ, ಕೆ.ಬಿ.ಸುಧಾ, ಕೆ.ಆರ್.ಗಂಗಾಧರ್, ಹರೀಶ್ ಮಿತ್ರ ಮತ್ತಿತರರಿದ್ದರು. 
ಜಿಲ್ಲೆ

ಸರ್ಕಾರಿ ವಿಶೇಷ ದತ್ತು ಸಂಸ್ಥೆಗೆ ಬಿಎಸ್ಪಿ ಮುಖಂಡರ ಭೇಟಿ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಗಾಂಧಿನಗರದ ಸರ್ಕಾರಿ ವಿಶೇಷ ದತ್ತು ಸಂಸ್ಥೆಯಲ್ಲಿ ಹೆಣ್ಣು ಮಗು ಬಿಸಿನೀರಿನಿಂದ ಸುಟ್ಟುಕೊಂಡಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಬಿಎಸ್‌ಪಿ ಮುಖಂಡರು ದತ್ತು ಕೇಂದ್ರಕ್ಕೆ ಭೇಟಿ ನೀಡಿ ಸಿಬ್ಬಂದಿಯೊAದಿಗೆ ಚರ್ಚಿಸಿ ಅಲ್ಲಿನ ನಿರ್ಲಕ್ಷÈದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ಮಕ್ಕಳ ಆರೈಕೆಯ ಅನುಭವ ಇಲ್ಲದವರಿಗೆ ವೃತ್ತಿಯನ್ನು ನೀಡಿರುವುದು ಬೇಜವಾಬ್ದಾರಿತನ. ತಮ್ಮ ಸ್ವಂತ ಮಕ್ಕಳನ್ನೇ ಪೋಷಿಸದ ಆಯಾಗಳು ಇತರೆ ಮಕ್ಕಳನ್ನು ಹೇಗೆ ಪೋಷಿಸುತ್ತಾರೆ ಎಂದು ಪ್ರಶ್ನಿಸಿದರು.

ಜ್ಞಾನದ ಅರಿವಿಲ್ಲದ ಶಿಶುವನ್ನು ಆರೈಕೆ ಮಾಡುವುದು ಒಂದು ವಿದ್ಯೆ. ಬೇಕಾಬಿಟ್ಟಿ ನೋಡಿಕೊಳ್ಳುವುದು ಸರಿಯಲ್ಲ. ಬಿಸಿನೀರು ತುಂಬಿ ಹರಿಯುವತನಕ ಆಯಾಗಳಿಗೆ ಬೇರೆ ಕೆಲಸ ಏನಿತ್ತು. ಮಗುವಿನ ಪೋಷಣೆಯಲ್ಲಿ ನಿರತರಾಗದ ಕಾರಣ ಆ ಮಗು ಇಂದು ಸುಟ್ಟುಕೊಂಡು ಆಸ್ಪತ್ರೆಗೆ ದಾಖಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಗುವಿನ ಪ್ರಕರಣದ ಸಂಬAಧ ಆಯಾರನ್ನು ಅಮಾನತ್ತುಗೊಳಿಸಿದರೆ ಸಾಲದು ಸಂಬAಧಿಸಿದ ಇಲಾಖೆ ವಿರುದ್ಧ ಶಿಸ್ತು ಕ್ರಮ ಹಾಗೂ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಬೇಕು. ಈ ರೀತಿಯ ಪ್ರಕರಣಗಳು ಪೂರ್ವಯೋಜಿತವಾಗಿವೆ. ಅಲ್ಲದೇ ಬಹಳ ದಿನಗಳಿಂದ ಜರುಗಿರಬಹುದು. ಇದೀಗ ಬೆಳಕಿಗೆ ಬರುತ್ತಿವೆ ಎಂದು ತಿಳಿಸಿದರು.

ಇತ್ತೀಚೆಗೆ ಸ್ವಂತ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಳಗೊಳ್ಳುತ್ತಿವೆ. ಈ ನಡುವೆ ದತ್ತು ಸಂಸ್ಥೆಯಲ್ಲಿ ಅನುಭವವಿಲ್ಲದ ಆಯಾಗಳಿಂದ ಪ್ರಕರಣ ದಾಖಲಾಗುತ್ತಿವೆ. ವ್ಯವಸ್ಥಾಪಕರು, ಆಯಾಗಳು ಪ್ರಜ್ಞಾ ಪೂರಕವಾಗಿ ದೌರ್ಜನ್ಯವೆಸಗಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು,

ಈ ಸಂದರ್ಭದಲ್ಲಿ ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಉಡುಪಿ-ಚಿಕ್ಕಮಗಳೂರು ಸಂಯೋಜಕ ಕೆ.ಆರ್.ಗಂಗಾಧರ್, ಮುಖಂಡ ಹರೀಶ್‌ಮಿತ್ರ ಮತ್ತಿತರರಿದ್ದರು.