ಜಿಲ್ಲೆ

ಸರ್ಕಾರಿ ಯೋಜನೆಗಳ ಲಾಭ ಪಡೆದುಕೊಳ್ಳಿ


ಯಾದಗಿರಿ: ದೇಶದ ನಿರ್ಮಾಣದಲ್ಲಿ ಕಟ್ಟಡ ಕಾರ್ಮಿಕಕರ ಶ್ರಮ ಅಪಾರವಾಗಿದ್ದು ಸರ್ಕಾರ ಅವರ ಕಲ್ಯಾಣಕ್ಕಾಗಿ ನಾನಾ ಯೋಜನೆಗಳನ್ನು ಜಾರಿ ಮಾಡುತ್ತಿದೆ ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ್ ತಿಳಿಸಿದರು.

ಶಾಸಕರ ಜನಸಂಪರ್ಕಕಾರ್ಯಾಲಯದಲ್ಲಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ನಿರ್ಮಾಣ ಮಹಿಳಾ ಕಾರ್ಮಿಕರಿಗೆ ಹೆರಿಕೆ, ಮದುವೆ ಬಾಂಡ್ಗಳನ್ನು ವಿತರಿಸಿ ಮಾತನಾಡಿ, ಈ ಹಿಂದೆ ಅಂಸಘಟಿತ ಕಾರ್ಮಿಕರಿಗೆ ಸಕರ್ಾರದ ಯೋಜನೆಗಳು ಮರೀಚಿಕೆಯಾಗಿದ್ದವು. ಆದರೆ ನಮ್ಮ ಸಕರ್ಾರ ಹಲವು ಕಾರ್ಯಕ್ರಮ ಜಾರಿಗೆ ತಂದಿದೆ. ಇವುಗಳ ಲಾಭ ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಮಿಕರಿಗೆ ಈಗಾಗಲೇ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಲಾಗುತ್ತಿದೆ. ಜತೆಯಲ್ಲಿ ಕಟ್ಟಡ ನಿಮರ್ಾಣ ಸಾಮಗ್ರಿಗಳ ಕಿಟ್ ಸಹ ವಿತರಣೆ ಮಾಡಲಾಗುತ್ತಿದೆ. ನಿಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವುದನ್ನು ಮರೆಯಬೇಡಿ ಎಂದು ತಿಳಿಸಿದರು.

ಜಿಲ್ಲಾ ಕಾರ್ಮಿಕ ಅಕಾರಿ ಉಮಾಶ್ರೀ ಎಸ್.ಕೋಳಿ, ಯಾದಗಿರಿ ಜಿಲ್ಲಾದ್ಯಂತ ಅರ್ಹ ಕಟ್ಟಡ ಕಾರ್ಮಿಕರ ನೋಂದಣಿ ಕಾರ್ಯ ಚಾಲ್ತಿಯಲ್ಲಿದೆ. ಜತೆಗೆ ಎಲ್ಲ ವರ್ಗದ ಕಾರ್ಮಿಕರು ಇ-ಶ್ರಮ್ ಕಾರ್ಡ ಮಾಡಿಕೊಳ್ಳಬೇಕು ಎಂದರು. ಕಾರ್ಮಿಕ ನಿರೀಕ್ಷಕ ಗಂಗಾಧರ, ಫಲಾನುಭವಿಗಳು ಇದ್ದರು.