ರಬಕವಿ-ಬನಹಟ್ಟಿ: ರಾಜ್ಯ ಸರ್ಕಾರದ ಮಹತ್ತರ ಯೋಜನೆಯಲ್ಲಿ ಒಂದಾಗಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯಿಂದ ನೇಕಾರ ಸಮುದಾಯಕ್ಕೆ ಅನೇಕ ಸೌಲಭ್ಯ ನೀಡಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಿಗಮದ ಅಧ್ಯಕ್ಷ ಕೀರ್ತಿ ಗಣೇಶ ತಿಳಿಸಿದರು.
ನಗರಸಭೆ ವ್ಯಾಪ್ತಿಯ ರಾಂಪುರ ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ದೇವರಾಜ ಅರಸು ಸ್ಮರಣೆ ಹಾಗೂ ನಿಗಮದಿಂದ ದೊರಕುವ ಯೋಜನೆಗಳ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನೇಕಾರರಿಗೆ ಸಬ್ಸಿಡಿ ಸಾಲ, ಅರಿವು ಶೈಕ್ಷಣಿಕ ಸಾಲ, ಸ್ವಯಂ ಉದ್ಯೋಗ ಸೇರಿ ಹಲವಾರು ಯೋಜನೆಗಳನ್ನು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ದೊರೆಯಲಿದೆ ಎಂದರು.
ರಬಕವಿಯ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀ, ಬನಹಟ್ಟಿ ಹಿರೇಮಠದ ಶ್ರೀ ಶರಣಬಸವ ಶಿವಾಚಾರ್ಯರು, ರಬಕವಿ-ಬನಹಟ್ಟಿ ರಾಂಪುರ-ಹೊಸೂರ ಹಳೇ ಹುಬ್ಬಳ್ಳಿಯ ಶಿವಶಂಕರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಬಸವರಾಜ ಕೊಕಟನೂರ, ಬಸಪ್ರಭು ಹಟ್ಟಿ, ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರ್ಕಿ, ಅರ್ಜುನ ಹಲಗಿಗೌಡರ, ಶ್ರೀಶೈಲ ದಭಾಡಿ, ಸಂಗಪ್ಪ ಉದಗಟ್ಟಿ, ಮಲ್ಲಪ್ಪ ಬಿರಾದಾರ, ಲಕ್ಷ್ಮೀಕಾಂತ ಬಿ., ಓಂಪ್ರಕಾಶ ಬಾಗೇವಾಡಿ, ಸದಾಶಿವ ಬರಗಿ, ಕಾಡು ಕೊಕಟನೂರ ಇದ್ದರು.