ಚಿಕ್ಕಮಗಳೂರು ಎಸ್‌ಪಿ ವಿಕ್ರಮ ಅಮಟೆ ಅವರಿಗೆ ಮನವಿ ಸಲ್ಲಿಸಿದ ನಾಗರೀಕ ಹೋರಾಟ ಸಮಿತಿ ಮುಖಂಡರು ನಗರದ ಶೃಂಗಾರ್ ಹಾಗೂ ಹನುಮಂತಪ್ಪ ವೃತ್ತದಲ್ಲಿ ಸರ್ಕಾರಿ ಬಸ್‌ಗಳ ನಿಲುಗಡೆ ರದ್ಧತಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಸಂತೋಷ್ ಕೋಟ್ಯಾನ್, ಶ್ಯಾಮ್ ವಿ ಗೌಡ, ಪ್ರದೀಪ್, ರಾಜೇಶ್, ನವೀನ್ ಶೆಟ್ಟಿ ಮತ್ತಿತರರಿದ್ದರು. 
ಜಿಲ್ಲೆ

ಸರ್ಕಾರಿ ಬಸ್ ನಿಲುಗಡೆ ರದ್ದತಿ ಆದೇಶ ಹಿಂಪಡೆಯಲು ಮನವಿ

ಚಿಕ್ಕಮಗಳೂರು: ನಗರದ ಶೃಂಗಾರ್ ಹಾಗೂ ಹನುಮಂತಪ್ಪ ವೃತ್ತದಲ್ಲಿ ಸರ್ಕಾರಿ ಬಸ್‌ಗಳ ನಿಲುಗಡೆ ರದ್ಧತಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ನಾಗರೀಕ ಹೋರಾಟ ಸಮಿತಿ ಮುಖಂಡರು ಎಸ್‌ಪಿ ಡಾ. ವಿಕ್ರಮ್ ಆಮಟೆ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಈ ವೇಳೆ ಹೋರಾಟ ಸಮಿತಿ ಸಂಚಾಲಕ ಸಂತೋಷ್ ಕೋಟ್ಯಾನ್ ಮಾತನಾಡಿ, ಸರ್ಕಾರಿ ಬಸ್‌ನಿಲ್ದಾಣದಿಂದ ಸುಮಾರು ೧ ಕಿ.ಮೀ. ವ್ಯಾಪ್ತಿಯಲ್ಲಿ ಬಸ್ ನಿಲುಗಡೆ ಇಲ್ಲದಿರುವ ಕಾರಣ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಶೀಘ್ರದಲ್ಲೇ ಬಸ್ ನಿಲುಗಡೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯವಾಗಿ ಶೃಂಗಾರ್ ವೃತ್ತಕ್ಕೆ ವಿಜಯಪುರ, ಗೌರಿಕಾಲುವೆ, ಬಸವನಹಳ್ಳಿ, ನೆಹರುನಗರ, ರಾಮನಹಳ್ಳಿ, ಅಯ್ಯಪ್ಪನಗರ, ಉಪ್ಪಳ್ಳಿ, ಮಲ್ಲಂದೂರು ಸೇರಿದಂತೆ ಗ್ರಾಮ ವ್ಯಾಪ್ತಿಗಳ ಸಾರ್ವಜನಿಕರಿಗೆ ತುಂಬಾ ಉಪಯುಕ್ತ ಮತ್ತು ಅತ್ಯವಶ್ಯಕ ನಿಲುಗಡೆ ಕೇಂದ್ರವಾಗಿದೆ. ಜೊತೆಗೆ ಹೆಚ್ಚು ವಿದ್ಯಾರ್ಥಿ ನಿಲಯ ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಹಳಷ್ಟು ನೆರವಾಗಲಿದೆ ಎಂದರು.

ಪ್ರಸ್ತುತ ಸ್ಥಳದಲ್ಲಿ ಬಿಸಿಲು, ಮಳೆಯಿಂದ ಸಾರ್ವಜನಿಕರಿಗೆ ರಕ್ಷಣೆಗಾಗಿ ನಿಲ್ದಾಣಕ್ಕೆ ತಂಗುದಾಣ ನಿರ್ಮಿಸಲು ಸರ್ಕಾರದಿಂದ ಪ್ರಯತ್ನಿಸಲಾಗುತ್ತಿದೆ. ಆದರೆ ಕೆಲವು ಪ್ರಬಾವಿಗಳ ಒತ್ತಡದಿಂದ ಬಸ್ ನಿಲ್ದಾಣ ಕಾಮಗಾರಿ ತಡೆಹಿಡಿದಿರುವ ಅನುಮಾನ ವ್ಯಕ್ತವಾಗುತ್ತಿದೆ. ಕಳೆದ ಮೂರುದಶಕಗಳ ಹಿಂದೆ ಬಸ್ ನಿಲುಗಡೆಗೆ ತಂಗುದಾಣವಿತ್ತು. ರಸ್ತೆ ಅಗಲೀಕರಣದಲ್ಲಿ ತೆರವುಗೊಳಿಸಿದ ನಂತರ ಹೊಸದಾಗಿ ತಂಗುದಾಣ ನಿರ್ಮಿಸಿಲ್ಲ ಎಂದು ದೂರಿದರು.

ಶೃಂಗಾರ್ ವೃತ್ತದಲ್ಲಿ ನಿಯಂತ್ರಣಕ್ಕೆ ಬಾರದಷ್ಟು ವಾಹನ ದಟ್ಟಣೆ ಇರುವುದಿಲ್ಲ. ಟ್ರಾಫಿಕ್ ನಿಯಂತ್ರಣಕ್ಕೆ ಮುಖ್ಯವಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಸುಧಾರಿಸಬೇಕಿದೆ. ಕಡೂರಿಗೆ ಕರ್ತವ್ಯಕ್ಕೆ ತೆರಳುವ ಸರ್ಕಾರಿ, ಖಾಸಗಿ ನೌಕರರು, ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರ ವಾಹನವನ್ನು ಮುಂಜಾನೆಯಿAದ ಸಂಜೆ ತನಕ ಪಾರ್ಕಿಂಗ್ ಮಾಡುವುದರಿಂದ ಈ ಭಾಗದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಇಲ್ಲಿ ನೋ ಪಾರ್ಕಿಂಗ್ ಮಾಡಿದರೆ ವಾಹನ ದಟ್ಟಣೆ ಉಂಟಾಗುವುದಿಲ್ಲ ಎಂದು ಹೇಳಿದರು.

ಇಡೀ ನಗರದಲ್ಲೇ ಒಂದು ವ್ಯವಸ್ಥೆಯಾದರೆ ಶೃಂಗಾರ್, ಹನುಮಂತಪ್ಪ ವೃತ್ತದವರೆಗೆ ವಿಶೇಷ ಪಾರ್ಕಿಂಗ್ ವ್ಯವಸ್ಥೆಯಿದೆ. ವಾರದ ಎರಡು ಮೂರು ದಿನಗಳು ೩-೪ ಚಕ್ರದ ವಾಹನಗಳ ಪಾರ್ಕಿಂಗ್ ಸ್ಥಳವಾಗಿದೆ. ಹೀಗಾಗಿ ಪಾರ್ಕಿಂಗ್ ವ್ಯವಸ್ಥೆ ಸುಧಾರಿಸಲು ಎರಡು ಬದಿ ಸಂಚಾರಿ ನಿಯಮಗಳನ್ನು ಕೈಗೊಂಡರೆ ಸರ್ಕಾರಿ ಬಸ್ ನಿಲುಗಡೆಗೆ ಪೂರಕವಾಗಲಿದೆ ಎಂದರು.

ಇದೇ ವೇಳೆ ಬಸ್ ನಿಲುಗಡೆ ರದ್ದತಿ ಸಂಬAಧ ಅಪರ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹೋರಾಟ ಸಮಿತಿ ಸದಸ್ಯರಾದ ಶ್ಯಾಮ್ ವಿ.ಗೌಡ, ಪ್ರದೀಪ್, ರಾಜೇಶ್, ನವೀನ್‌ಶೆಟ್ಟಿ, ಮಂಜುನಾಥ್, ಸುನೀಲ್, ಆಟೋ ಚಾಲಕರಾದ ಯಶವಂತ್, ಶೇಖರ್, ಸಮೀರ್ ಮತ್ತಿತರರಿದ್ದರು.