ಕೆ.ಆರ್.ಸಾಗರ: ಕೆ.ಆರ್.ಸಾಗರ ಸರ್ಕಾರಿ ಫ್ರೌಡಶಾಲೆ, ಕೆ.ಆರ್.ಸಾಗರ ಅರೋಗ್ಯ ಮತ್ತು ಕ್ಷೇಮ ಕೇಂದ್ರ ಹಾಗೂ ತಾಲೂಕು ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಸೊಳ್ಳೆಗಳ ದಿನಾಚರಣೆಯನ್ನು ಏರ್ಪಡಿಸಲಾಗಿತ್ತು.
ಸೊಳ್ಳೆಗಳ ವಿಧಗಳು, ಸೊಳ್ಳೆಯಿಂದ ಹರಡುವ ರೋಗಗಳು, ಅದನ್ನು ತಡೆಗಟ್ಟಲು ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ನಿರೀಕ್ಷಕ ಚಂದನ್, ವಿದ್ಯಾರ್ಥಿಗಳು, ಶಿಕ್ಷಕರು ಸೊಳ್ಳೆಗಳಿಂದ ಆಗುವ ರೋಗಗಳನ್ನು ತಡೆಗಟ್ಟಬೇಕಾದರೆ ನಿಮ್ಮ ಪರಿಸರ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು.
ನಿಮ್ಮ ಮನೆ ಹಾಗೂ ಶಾಲೆಗಳ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಮಲಗಲು ಸೊಳ್ಳ ಪರದೆ ಉಪಯೋಗಿಸಿ, ಕೈ-ಕಾಲುಗಳಿಗೆ ಬೇವಿನ ಎಣ್ಣೆ ಹಾಕಿಕೊಂಡರೆ ಸೊಳ್ಳೆಯಿಂದ ರಕ್ಷಣೆ ಪಡೆಯಬಹುದು, ನಿಮಗೆ ಜ್ವರ ಕಂಡಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮವಾದ ಬೆಳವಣಿಗೆ ಎಂದರು.
ಸಮುದಾಯ ಆರೋಗ್ಯ ಅಧಿಕಾರಿ ಚೇತನ್, ಪ್ರೌಢಶಾಲಾ ವಿಭಾಗದ ಶಿಕ್ಷಕರು, ವಿದ್ಯಾರ್ಥಿಗಳು ಆಶಾ ಕಾರ್ಯಕರ್ತೆಯರು ಇದ್ದರು.