ಕೆ.ಆರ್.ಅನ್ನಪೂರ್ಣ 
ಜಿಲ್ಲೆ

ಸರ್ಕಾರಿ ಪ್ರಥಮ ಕಾಲೇಜಿಗೆ ಶೇ.81.52 ಫಲಿತಾಂಶ

ಕಳಸ: ಕುವೆಂಪು ವಿಶ್ವವಿದ್ಯಾಲಯದ ಸಂಯೋಜನೆಗೊಳಪಟ್ಟಿರುವ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2023-24ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಿ.ಕಾಂ ವಿಭಾಗದಲ್ಲಿ ಕೆ.ಆರ್.ಅನ್ನಪೂರ್ಣ ಶೇ.89 ಪಡೆದು ಕಾಲೇಜಿಗೆ ಪ್ರಥಮ, ಸೌಂದರ್ಯಾ ಶೇ. 85.64 ಪಡೆದು ದ್ವಿತೀಯ ಸ್ಥಾನ, ಬಿ.ಎ ವಿಭಾಗದಲ್ಲಿ ಎ.ಎಸ್.ಮಹಮ್ಮದ್ ಇರ್ಫಾನ್ ಶೇ.84.5 ಪಡೆದು ಪ್ರಥಮ ಸ್ಥಾನ ಮತ್ತು ಎಚ್.ವಿ.ವಿನುತಾ ಶೇ.83.57 ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಬಿ.ಕಾಂ ವಿಭಾಗ ಶೇ.81.81 ಮತ್ತು ಬಿ.ಎ ವಿಭಾಗ ಶೇ.81.25 ಫಲಿತಾಂಶ ಪಡೆದಿದೆ. ಒಟ್ಟಾರೆ ಶೇ.81.52 ಫಲಿತಾಂಶ ಪಡೆದಿದೆ ಎಂದು ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆ ಮತ್ತು ಕಾಲೇಜಿನ ಬೋಧಕ ವರ್ಗದ ಶ್ರಮಕ್ಕೆ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ರಾಜೇಂದ್ರ ಹೆಬ್ಬಾರ್ ಹಿತ್ತಲಮಕ್ಕಿ ಶ್ಲಾಘಿಸಿದ್ದಾರೆ.