ಔರಾದ್: ನಿಗಧಿತ ವೇಳೆಯಲ್ಲಿ ಸರ್ಕಾರಿ ಕೆಲಸ ಆಗುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗುತ್ತಿವೆ. ಈ ಬಗ್ಗೆ ಜಾಗೃತರಾಗಿಸಲು ಅರಿವಿನ ಕಾರ್ಯಕ್ರಮ ನೀಡಲಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಕೆ.ಕನಶೆಟ್ಟಿ ಹೇಳಿದರು.
ಸಂತಪುರ ದೀಪಾಲಯ ಶಾಲೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಕುರಿತ ಜಾಗೃತಿ ಅರಿವು ಸಪ್ತಾಹ ನಿಮಿತ್ತ ಶನಿವಾರ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಕೆಲಸ ವಿಳಂಬವಾಗುತ್ತಿದ್ದರೆ, ಹಣ ಕೇಳುತ್ತಿದ್ದರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಲೋಕಾಯುಕ್ತರಿಗೆ ದೂರು ನೀಡಬೇಕು ಎಂದು ತಿಳಿಸಿದರು.
ಲೋಕಾಯುಕ್ತ ಅಧಿಕಾರಿ ಪ್ರದೀಪ್ ಕುಮಾರ ಕೊಳ್ಳ ಮಾತನಾಡಿ, ಯಾರಾದರೂ ಲಂಚ ಕೇಳುತ್ತಿದ್ದರೆ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಬೇಕು ಎಂದರು.
ಭ್ರಷ್ಟಚಾರ ನಿರ್ಮೂಲನೆ ಬಗ್ಗೆ ಶಪಥ ಮಾಡಿಸಲಾಯಿತು. ಸಂಪನ್ಮೂಲ ವ್ಯಕ್ತಿ ಕೇಶವ ಶ್ರೀ ಮಾಳೆ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಗುರುರಾಜ, ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ತಾಲೂಕು ಆರೋಗ್ಯ ಅಧಿಕಾರಿ ಗಾಯತ್ರಿ, ಮಹೇಶಕುಮಾರ ಪಾಟೀಲ್, ಹಿರಿಯ ಮೇಲ್ವಿಚಾರಕಿ ಯೋಗೇಶ್ವರಿ, ರಾಜೇಶ್ವರಿ, ವಿಜಯಲಕ್ಷ್ಮೀ, ಶೋಭಾವತಿ, ಶೋಭಾ ಇತರರಿದ್ದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಖಲೀಲ್ ಸ್ವಾಗತಿಸಿದರು. ಗೌರಿಶಂಕರ ಪರತಾಪುರೆ ನಿರೂಪಣೆ ಮಾಡಿದರು.