ಕಲಬುರಗಿ: ಜಿಲ್ಲೆಯಲ್ಲಿ ಡೆಂಘೆ ಜ್ವರ ನಿಯಂತ್ರಣ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲೆಯ ಸರ್ಕಾರಿ ಕಚೇರಿ, ಆಸ್ಪತ್ರೆ, ಶಾಲಾ-ಕಾಲೇಜು, ಗ್ರಾಮ ಪಂಚಾಯಿತಿ, ವಸತಿ ನಿಲಯಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಜಿಪಂ ಸಿಇಒ ಭಂವರ್‌ಸಿಂಗ್ ಮೀನಾ ಪೊರಕೆ ಹಿಡಿದು ಕಸಗುಡಿಸಿದರು. ಸಹ ಅಧಿಕಾರಿ, ಸಿಬ್ಬಂದಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಸಿಇಒ ಭಂವರ್‌ಸಿಂಗ್ ಮೀನಾ, ಈಡಿಸ್ ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಬಹುತೇಕರು ಕಚೇರಿ, ಕಾರ್ಖಾನೆ, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ರೋಗಿಗಳು ಆಸ್ಪತ್ರೆಯಲ್ಲಿರುತ್ತಾರೆ. ಮಕ್ಕಳು ಶಾಲೆ, ಕಾಲೇಜು, ಅಂಗನವಾಡಿಯಲ್ಲಿ ಇರುತ್ತಾರೆ. ಅಲ್ಲಿ ಡೆಂಘಿ ಹರಡುವ ಸಾಧ್ಯತೆ ಹೆಚ್ಚಾಗಿದ್ದು, ಅಲ್ಲಿ ಸ್ವಚ್ಛತೆ ಕಾಪಾಡಲು ಅಭಿಯಾನ ನಡೆಸಲಾಗುತ್ತಿದೆ ಎಂದರು.
ನೀರಿನ ಟ್ಯಾಂಕ್‌ಗೆ ಗಪ್ಪೆ ಮೀನು: ನಗರದ ಡಿಎಚ್‌ಒ ಕಚೇರಿ ಆವರಣದಲ್ಲಿ ವೈದ್ಯರು, ಅಧಿಕಾರಿ, ಸಿಬ್ಬಂದಿಯಿAದ ಸ್ವಚ್ಛತಾ ಅಭಿಯಾ ನಡೆಸಿದರು. ಆವರಣದಲ್ಲಿನ ನೀರಿನ ಟ್ಯಾಂಕ್‌ಗೆ ಡಿಎಚ್‌ಓ ಡಾ.ರವಿಕಾಂತ ಸ್ವಾಮಿ ಅವರು ಈಡಿಸ್ ಸೊಳ್ಳೆ ತಿನ್ನುವ ಗಪ್ಪೆ ಮೀನು ಬಿಟ್ಟರು. ಇದೇ ವೇಳೆ ಡೆಂಘಿ ವಿರೋಧಿ ಮಾಸಾಚರಣೆ ಜಾಗೃತಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.